ಭತ್ತದ ಗದ್ದೆಗೆ ಹರಿಯದ ನೀರು : ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ

ದಾವಣಗೆರೆ : ಭತ್ತದ ಗದ್ದೆಗೆ ನೀರು ಬರಲಿಲ್ಲ ಎಂದು ರೈತನೊಬ್ಬ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮೃತ ರೈತನನ್ನು ಬಸವನಗೌಡ (28) ಎಂದು ಹೆಸರಿಸಲಾಗಿದೆ. ಭದ್ರಾ ಜಲಾಶಯದ ನೀರನ್ನು ನಂಬಿಕೊಂಡು ರೈತ ನಾಟಿ ಮಾಡಿದ್ದ. ಆದರೆ ಭದ್ರಾ ಜಲಾಶಯದ ನೀರು ಕೊನೆಯ ಭಾಗಕ್ಕೆ ಹರಿಯದ ಹಿನ್ನೆಲೆಯಲ್ಲಿ ನಾಟಿ ಮಾಡಿದ್ದ ಭತ್ತ ಒಣಗಿತ್ತು.

ಇಂದು ಬೆಳಗ್ಗೆ ಭತ್ತದ ಗದ್ದೆಗೆ ಹೋದ ಬಸವನಗೌಡ ಬೆಳೆ ಒಣಗಿದ್ದನ್ನು ನೋಡಿ ಮನನೊಂದು ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೆ ರೈತನಿಗೆ ಟ್ರ್ಯಾಕ್ಟರ್‌ ಮತ್ತು ಜಮೀನಿನ ಮೇಲೆ ಸಾಲ ಇತ್ತು. ಈ ಹಿನ್ನೆಲೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com