WATCH : ರೈತ ನಾಯಕನಿಗೆ ಕಪಾಳ ಮೋಕ್ಷ ಮಾಡಿ,ಚಪ್ಪಲಿ ತೋರಿಸಿ ಬೆದರಿಸಿದ BJP ನಾಯಕಿ

ಚೆನ್ನೈ : ಕೇಂದ್ರ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಸಿಟ್ಟಿಗೆದ್ದ ಬಿಜೆಪಿ ಮಹಿಳಾ ವಿಭಾಗದ ಜಿಲ್ಲಾ ಕಾರ್ಯದರ್ಶಿ ನೆಲ್ಲಯ್‌ ಯಮ್ಮಾಳ್‌ ಎಂಬುವವರು ರೈತ ನಾಯಕರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ರೈತ ನಾಯಕ ಅಯ್ಯಕಣ್ಣು ಅವರು ರೈತರ ಕಷ್ಟಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಪರಿಹಾರ ಕೇಳಲು 100 ದಿನಗಳ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದು, ಕನ್ಯಾಕುಮಾರಿಯಿಂದ ಈ ರ್ಯಾಲಿಯನ್ನು ಪ್ರಾರಂಭಿಸಿದ್ದರು. ತಾವು ಹೋದ ಕಡೆಯಲ್ಲೆಲ್ಲಾ ಜನರಿಗೆ ಅರಿವು ಮೂಡಿಸಿ, ತಮ್ಮ ಬೇಡಿಕೆಗಳನ್ನೊಳಗೊಂಡ ಕರಪತ್ರಗಳನ್ನು ಹಂಚಿದ್ದರು. ಅಂತೆಯೇ ತಮಿಳುನಾಡಿನ ತಿರುಚೆಂದೂರು ದೇವಾಲಯದ ಆವರಣದಲ್ಲಿ ಮಾತನಾಡಿ ಬಳಿಕ ರೈತರ ಬೇಡಿಕೆಗಳ ಕರಪತ್ರ ವಿತರಿಸುತ್ತಿರುವ ವೇಳೆ ಬಿಜೆಪಿ ನಾಯಕಿ ನೆಲ್ಲಯ್‌ ಯಮ್ಮಾಳ್‌ ಅಲ್ಲಿಗೆ ಬಂದಿದ್ದು, ಕರಪತ್ರಗಳನ್ನು ಕಸಿದುಕೊಂಡು ಜಗಳ ಶುರು ಮಾಡಿದ್ದರು. ಬಳಿಕ ರೈತ ನಾಯಕನಿಗೆ ಕಪಾಳ ಮೋಕ್ಷ ಮಾಡಿದ್ದು, ಬಳಿಕ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು ಸೋಶಿಯಲ್‌ ಮೀಡಿಯಾಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com