ಇಂದು ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಬಂದ್‌….ಕಾರಣವೇನು…?

ಬೆಂಗಳೂರು : ಶುಕ್ರವಾರ ಬಂತೆಂದರೆ ಸಿನಿ ರಸಿಕರಿಗೆ ಕುತೂಹಲ ಹೆಚ್ಚಿರುತ್ತದೆ.ಆದರೆ ಈ ಶುಕ್ರವಾರ ಸಿನಿ ರಸಿಕರು ನಿರಾಶರಾಗಿದ್ದಾರೆ. ಇಡೀ ಕರ್ನಾಟಕದಲ್ಲಿ ಇಂದು ಯಾವುದೇ ಸಿನಿಮಾ ಬಿಡುಗಡೆ ಕಂಡಿಲ್ಲ. ಜೊತೆಗೆ ಹಳೆಯ ಸಿನಿಮಾಗಳನ್ನು ಪ್ರದರ್ಶನವನ್ನೂ ರದ್ದುಗೊಳಿಸಲಾಗಿದೆ.

ಸಂಸ್ಥೆಗಳ ಶುಲ್ಕ ಹೆಚ್ಚಳ ಸಂಬಂಧ ಯುಎಫ್‌ಒ, ಕ್ಯೂಬ್‌ ನಡುವಿನ ಬಿಕ್ಕಟ್ಟಿನ ಕುರಿತಾಗಿ ದಕ್ಷಿಣ ಭಾರತ ವಾಣಿಜ್ಯ ಮಂಡಳಿ ಸಾಂಕೇತಿಕವಾಗಿ ಪ್ರದರ್ಶನವನ್ನು ರದ್ದುಪಡಿಸಿ ಹೋರಾಟಕ್ಕೆ ಮುಂದಾಗಿದೆ. ಯುಎಫ್‌ಒ ಹಾಗೂ ಕ್ಯೂಬ್‌ ಸಂಸ್ಥೆಗಳು ಸಂಧಾನಕ್ಕೆ ಬರದ ಪಕ್ಷದಲ್ಲಿ ದಕ್ಷಿಣ ಭಾರತ ಚಿತ್ರೋದ್ಯಮ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಸಿನಿಮಾ ಪ್ರದರ್ಶನವನ್ನು ರದ್ದು ಮಾಡಿರುವುದಾಗಿ ಮೂಲಗಳು ತಿಳಿಸಿವೆ,

 

Leave a Reply

Your email address will not be published.

Social Media Auto Publish Powered By : XYZScripts.com