ಜೈಲಿಗೆ ಹೋಗುತ್ತೇವೆಂದು ಹೆದರಿ ಸಿದ್ರಾಮಯ್ಯ ಲೋಕಾಯುಕ್ತ ಮುಚ್ಚಿ ಹಾಕಿದ್ರು : ಎಚ್. ವಿಶ್ವನಾಥ್

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ಎಚ್. ವಿಶ್ವನಾಥ್ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ‘ ಲೋಕಾಯುಕ್ತ ಮುಚ್ಚಿಹಾಕಲು ಕಾರಣ ಸಿದ್ದರಾಮಯ್ಯ ಮಾಡಿರುವ ಭ್ರಷ್ಟಾಚಾರ. ಸಿದ್ದರಾಮಯ್ಯ ಜೈಲಿಗೆ ಹೋಗುತ್ತೆವೆಂದು ಹೆದರಿ ಲೋಕಾಯುಕ್ತ ಮುಚ್ಚಿ ಹಾಕಿದ್ರು. ಲೋಕಾಯುಕ್ತ ಬದಲಿಗೆ ಹಲ್ಲಿಲ್ಲದ ಹಾವಿನಂತ ಎಸಿಬಿಯನ್ನ ತಂದ್ರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಬಲಿಷ್ಠವಾದ ಲೋಕಾಯುಕ್ತ ಹಾಳು ಮಾಡಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ ‘ ಎಂದಿದ್ದಾರೆ.

ಲೋಕಾಯುಕ್ತ ಕಚೇರಿಯಲ್ಲಿ ನ್ಯಾಯಾಧಿಶರ ಮೇಲೆ ಹಲ್ಲೆ ನಾನು ಖಂಡಿಸುತ್ತೇನೆ. ಲೋಕಾ ನ್ಯಾಯಾಧಿಶರ ವಿಶ್ವನಾಥ್ ಶೆಟ್ಟಿ ಮೇಲೆ ಹಲ್ಲೆಗೆ ನೇರ ಹೊಣೆ ಕಾಂಗ್ರೆಸ್ ಸರ್ಕಾರ ಹಾಗೂ ಗೃಹ ಮಂತ್ರಿ ರಾಮಲಿಂಗಾರೆಡ್ಡಿ ‘

ನಿಮ್ಮ ಮನಸ್ಥಿತಿಯಲ್ಲಿ ನಿಮಗೆ ದ್ವೇಷ ಇದೆ ವೈರಾಗ್ಯ ಇದೆ. ತಾವೇ ನೈಸ್ ಹಗರಣದ ಭ್ರಷ್ಟ ಅಂತ ವರದಿ ನೀಡಿ ಈಗ ಅಶೋಕ್ ಖೇಣಿಯನ್ನ ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದಾರೆ. ೩೩೦ ಕೀಮಿ ಕಾಲ್ನಡಿಗೆ ಶೊಕಿಗೆ ಮಾಡಿದ್ದು ಭ್ರಷ್ಟಾಚಾರ ದಲ್ಲಿ ತೊಡಗಿದವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೋಳ್ಳೋಕ್ಕಾ..?

ಸದ್ಯ ಲೆನಿನ್, ಪೆರಿಯಾರ್, ಅಂಬೇಡ್ಕರ್ ಅವರ ವಿಗ್ರಗಹಗಳನ್ನು ಹಾಳ ಮಾಡುವುದು ತಪ್ಪು. ದಾರ್ಶನಿಕ, ಹೋರಾಟಗಾರ ಶಿಲೆಗಳನ್ನ ಹಾಳು ಮಾಡಬಹುದು ಆದ್ರೆ ಅವರ ಸಿದ್ಧಾಂತಗಳನ್ನಲ್ಲ. ಈ ಬಾರಿ ಚುನಾವಣೆಯಲ್ಲಿ ಮತದಾರರ ಬಂಧುಗಳು ಅನೀರಿಕ್ಷಿತ ಫಲಿತಾಂಶ ನೀಡುತ್ತಾರೆ.

‘ ಯಾರ್ಯಾರೋ ಕಾಂಗ್ರೆಸ್ ಸೇರಿದ ಮಾತ್ರಕ್ಕೆ ಆಪಕ್ಷ ಜಯಗಳಿಸಲು ಸಾಧ್ಯವಿಲ್ಲ ಜನ ನಿರ್ಧಾರಿಸುತ್ತಾರೆ ‘ ಎಂದು ಖಾಸಗಿ ಹೋಟೆಲ್‌ ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್ .ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.