ಲೆನಿನ್, ಪೆರಿಯಾರ್ ಆಯ್ತು, ಈಗ ಅಂಬೇಡ್ಕರ್, ಗಾಂಧೀಜಿ ಪುತ್ಥಳಿಗೂ ದುಷ್ಕರ್ಮಿಗಳಿಂದ ಹಾನಿ

ತಿರುವನಂತಪುರಂ/ ಚೆನ್ನೈ : ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಧ್ವಂಸಗೊಳಿಸಿದ ಬಳಿಕ ದೇಶದ ಅನೇಕ ಕಡೆ ನಾಯಕರ ಪುತ್ಥಳಿಗಳ ಮೇಲೆ ದಾಳಿ ನಡೆಯುತ್ತಿದೆ. ಈ ಪಟ್ಟಿಗೆ ಈಗ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಪ್ರತಿಮೆಗಳೂ ಸೇರಿವೆ.

ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಯನ್ನು ನೆಲಸಮ ಮಾಡಿದ್ದ ಬೆನ್ನಲ್ಲೇ ತಮಿಳುನಾಡಿನಲ್ಲಿ ಪೆರಿಯಾರ್ ಅವರ ಪುತ್ಥಳಿ ಮೇಲೂ ದಾಳಿ ನಡೆದಿತ್ತು. ಇದಾದ ಬಳಿಕ ತಮಿಳುನಾಡಿನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆಗೆ ಪೇಂಟ್ ಸುರಿದು ವಿರೂಪಗೊಳಿಸಲಾಗಿದೆ.
ಇನ್ನು ಕೇರಳದ ಕಣ್ಣೂರಿನ ತಾಲಿ ಪರಂಬಾ ಪ್ರದೇಶದಲ್ಲಿ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಗೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ಪ್ರತಿಮೆಯ ಎಡಭಾಗದ ಕೆನ್ನೆಗೆ ಹಾನಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com