ಹೆಲ್ಮೆಟ್ ಧರಿಸಿಲ್ಲವೆಂದು ಚೇಸ್ ಮಾಡಿದ ಪೊಲೀಸರು : ಬೈಕ್ನಿಂದ ಬಿದ್ದು ಗರ್ಭಿಣಿ ಸಾವು

ಚೆನ್ನೈ : ಹೆಲ್ಮೆಟ್ ಹಾಕದೆ ವಾಹನ ಚಾಲನೆ ಮಾಡುತ್ತಿರುವುದನ್ನು ನೋಡಿದ ಟ್ರಾಫಿಕ್ ಪೊಲೀಸ್ ಒಬ್ಬರು ವಾಹನ ಸವಾರನನ್ನು ಹಿಡಿಯಲು ಹೋದ ವೇಳೆ ಗರ್ಭಿಣಿಯೊಬ್ಬರು ಬೈಕ್ನಿಂದ ಬಿದ್ದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ
ತಮಿಳುನಾಡಿನ ತಿರುಚಿಯಲ್ಲಿ ಈ ಘಟನೆ ನಡೆದಿದೆ. ರಾಜಾ ಎಂಬ ವ್ಯಕ್ತಿ ಪತ್ನಿಯ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದು, ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಈ ವೇಳೆ ತಿರುವೆಂಬೂರ್ ಚೆಕ್ ಪೋಸ್ಟ್ನಲ್ಲೂ ಬೈಕ್ ನಿಲ್ಲಿಸದೆ ಮುಂದೆ ಸಾಗಿದ್ದರು. ಕೂಡಲೆ ಟ್ರಾಫಿಕ್ ಪೊಲೀಸ್ ಅವರಿಬ್ಬರನ್ನು ಚೇಸ್ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹಿಂಬದಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದು ಮೃತ ಪಟ್ಟಿರುವುದಾಗಿ ಹೇಳಲಾಗುತ್ತಿದೆ.
ಮತ್ತೊಂದು ಮೂಲಗಳ ಪ್ರಕಾರ, ಪೊಲೀಸ್ ಮದ್ಯ ಸೇವಿಸಿದ್ದು, ಮಹಿಳೆಯ ಒದ್ದ ಹಿನ್ನೆಲೆಯಲ್ಲಿ ಆಕೆ ಕೆಳಕ್ಕೆ ಬಿದ್ದು ಸಾವಿಗೀಡಾಗಿರುವುದಾಗಿಯೂ ಹೇಳಲಾಗುತ್ತಿದೆ. ಘಟನೆಯನ್ನು ನೋಡುತ್ತಿದ್ದ ಸಾರ್ವಜನಿಕರು ಪೊಲೀಸ್ ಅಧಿಕಾರಿಯ ವಿರುದ್ದ ಪ್ರತಿಭಟನೆ ನಡೆಸಿದ್ದು,ಬಳಿಕ ಬಂಧಿಸಿರುವುದಾಗಿ ಹೇಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com