ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ‘ನಾಡೋಜ’ ಪ್ರಶಸ್ತಿಗೆ ಆಯ್ಕೆ

ಬಳ್ಳಾರಿ : ಹಂಪಿ ಕನ್ನಡ ವಿವಿಯ ಘಟಿಕೋತ್ಸವ ಹಿನ್ನೆಲೆಯಲ್ಲಿ ಈ ಬಾರಿಯ ನಾಡೋಜಕ್ಕೆ ಹೈಕ ಭಾಗದ ಖ್ಯಾತ ಸಂಗೀತಗಾರ ರಾಜೀವ್ ತಾರಾನಾಥ್ ಅವರ ಆಯ್ಕೆ ಮಾಡಲಾಗಿದೆ. ಖ್ಯಾತ ಸಂಗೀತಕಾರ ಸರೋದ್ ವಾದಕ ರಾಜೀವ್ ತಾರಾನಾಥ್ ಅವರಿಗೆ ಈ ಬಾರಿಯ ನಾಡೋಜ ಸಲ್ಲಿಸಲಾಗುವುದು.

ಹಂಪಿ ಕನ್ನಡ ವಿವಿ ಯ ನುಡಿ ಹಬ್ಬದ ಹಿನ್ನೆಲೆಯಲ್ಲಿ ನಾಡೋಜ ಗೌರವ ನೀಡಲಾಗುತ್ತದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕುಲಪತಿ ಮಲ್ಲಿಕಾ ಘಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

10/03/18ರಂದು ನಡೆಯುವ ಹಂಪಿ ಕನ್ನಡ ವಿವಿಯ 26ನೇ ನುಡಿ ಹಬ್ಬದಲ್ಲಿ ನಾಡೋಜ ಗೌರವ ಸಮರ್ಪಣೆ ನಡೆಯಲಿದೆ. ವಿವಿದ ಕೋರ್ಸ ಗಳಲ್ಲಿ 299 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಚಿತ್ರಕಲಾ ವಿಭಾಗದಿಂದ ಬಿ.ವಿ.ಎ ಮತ್ತು ಡಿಪ್ಲೊಮ ದಿಂದ 503 ವಿದ್ಯಾರ್ಥಿಗಳು, ದೂರ ಶಿಕ್ಷಣದಿಂದ ವಿವಿಧ ಕೋರ್ಸ್ ಗಳಲ್ಲಿ 1395 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com