ನಾನು ಸುಂದರ್ ಗೌಡರನ್ನು ಸ್ವ ಇಚ್ಛೆಯಿಂದ ಮದುವೆಯಾಗಿದ್ದೇನೆ ಎಂದ ಶಾಸಕರ ಪುತ್ರಿ

ಬೆಂಗಳೂರು : ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಲಕ್ಷ್ಮೀ ನಾಯ್ಕ್, ನಿರ್ಮಾಪಕ ಸುಂದರ್ಗೌಡ ಅವರನ್ನು ಚಾಮುಂಡಿಬೆಟ್ಟದಲ್ಲಿ ವಿವಾಹವಾಗಿದ್ದು, ಬಳಿಕ ಫೇಸ್ಬುಕ್ನಲ್ಲಿ ವಿಡಿಯೋ ವೊಂದನ್ನು ಪೋಸ್ಟ್ ಮಾಡಿದ್ದಾರೆ.
ನಾನು, ಸುಂದರ್ ಗೌಡ ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ. ಮನಸಾರೆ ಪ್ರೀತಿಸಿದ್ದೇವೆ. ನಮ್ಮಿಂದ ಯಾರಿಗೂ ತೊಂದರೆಯಾಗಬಾರದು ಹಾಗೂ ಹಾನಿಯಾಗಬಾರದು. ನಾನು ಸುಂದರ್ ಅವರನ್ನು ವಿವಾಹವಾಗಿದ್ದಕ್ಕೆ ಯಾರ ಒತ್ತಡವೂ ಇಲ್ಲ. ನನ್ನ ಸ್ವ ಇಚ್ಛೆಯಿಂದ ಮದುವೆಯಾಗಿದ್ದೇನೆ. ಅಲ್ಲದೆ ನಾನು ಮೇಜರ್ ಎಂದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com