ವೈದ್ಯಲೋಕಕ್ಕೇ ಸವಾಲಾಯ್ತು ಮಂಗಳೂರಿನ ಬಾಲಕಿಯ ಸಮಸ್ಯೆ…..ಆಗಿದ್ದೇನು ?

ಮಂಗಳೂರು : ಜಗತ್ತಿನಲ್ಲಿ ಎಂಥೆಂಥಾ ಸಮಸ್ಯೆಗಳು ಉದ್ಬವವಾಗುತ್ತವೆ ಎಂಬುದರ ಅರಿವೇ ಇರುವುದಿಲ್ಲ. ಸಾಮಾನ್ಯ ಮನುಷ್ಯನಿಗೆ ವಿಚಿತ್ರ ರೋಗಗಳು ಬಂದು ಅದು ವೈದ್ಯರಿಗೂ ತಿಳಿಯದೇ ಕೊನೆಗೆ ಸಾವಿಗೀಡಾದ ಉದಾಹರಣೆಗಳೂ ಇವೆ. ಅಂಥದ್ದೇ ಪ್ರಕರಣವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಶಾಲಾ ಬಾಲಕಿಯೋರ್ವಳ ಕಣ್ಣಿಂದ ಸತ್ತ ಇರುವೆಗಳು ಹೊರಬರುತ್ತಿರುವ ಈ ವಿಚಿತ್ರ ವಿದ್ಯಮಾನವೊಂದು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಎಂಬಲ್ಲಿ ಕಂಡು ಬಂದಿದೆ.

ಇಲ್ಲಿನ ಅಮ್ಮು ಆಚಾರಿ ಮತ್ತು ಚಂಪಾವತಿ ದಂಪತಿ ಪುತ್ರಿ ಐದನೇ ತರಗತಿ ವಿದ್ಯಾರ್ಥಿನಿ ಅಶ್ವಿನಿ ಎಂಬಾಕೆಯ ಎಡಗಣ್ಣಿನ ಕೆಳ ಭಾಗದಿಂದ ಪ್ರತೀ ದಿನ ಹಲವು ಬಾರಿ ಸತ್ತ ಇರುವೆಗಳು ಉದುರುತ್ತಿದ್ದು, ಹೆತ್ತವರಲ್ಲಿ ಆತಂಕ ಸೃಷ್ಟಿಸಿದೆ. ಸಮಸ್ಯೆ ಬೆಳಕಿಗೆ ಬಂದ ಕೂಡಲೇ ಸ್ಥಳೀಯ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿದ್ದು, ಕಣ್ಣಿಗೆ ಡ್ರಾಪ್ಸ್ ನೀಡಿದ್ದಾರೆ. ಅಲ್ಲದೇ ಬಾಲಕಿ ರಾತ್ರಿ ಮಲಗಿದ ವೇಳೆ ಕಿವಿಯಿಂದ ಒಳಹೋಗೋ ಇರುವೆಗಳು ಬೆಳಿಗ್ಗೆ ಕಣ್ಣಿಂದ ಹೊರ ಬರೋ ಸಾಧ್ಯತೆ ಇದೆ ಅಂದಿದ್ದಾರೆ. ಇರುವೆ ಹೊರ ಬರೋ ಸಮಯದಲ್ಲಿ ಕಣ್ಣಿನಲ್ಲಿ ತುರಿಕೆ, ಉರಿ ಮತ್ತು ನೀರು ತುಂಬುತ್ತದೆ. ಸ್ವಲ್ಪ ಮಟ್ಟಿನ ನೋವೂ ಇರುವುದಾಗಿ ಬಾಲಕಿ ಹೇಳಿದ್ದಾಳೆ. ಈಗಾಗಲೇ ಕಳೆದ 11 ದಿನಗಳಲ್ಲಿ 70 ಕ್ಕೂ ಅಧಿಕ ಸತ್ತ ಇರುವೆಗಳು ಕಣ್ಣಿಂದ ಉದುರಿವೆ ಎಂದು ಹೆತ್ತವರು ತಿಳಿಸಿದ್ದಾರೆ. ಸದ್ಯ ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿಗಳು ತಪಾಸಣೆ ನಡೆಸಿದ್ದು, ಹೆಚ್ಚಿನ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.

Leave a Reply

Your email address will not be published.