Hyderabad : Wi-Fi ಆಫ್ ಮಾಡಿದ್ದಕ್ಕೆ ಹೆಂಡತಿಯನ್ನು ಥಳಿಸಿದ ಪತಿರಾಯ..!

ಮನೆಯಲ್ಲಿ ವೈಫೈ ಸ್ವಿಚ್ಚನ್ನು ಆಫ್ ಮಾಡಿದ್ದಕ್ಕೆ ಹೆಂಡತಿಯ ಮೇಲೆ ಕೋಪಗೊಂಡ ಪತಿರಾಯ ಆಕೆಯನ್ನು ಥಳಿಸಿದ ಘಟನೆ ತೆಲಂಗಾಣ ರಾಜಧಾನಿ ಹೈದರಾಬಾದ್ ನಗರದ ಸೋಮಾಜಿಗುಡಾ ಪ್ರದೇಶದಲ್ಲಿ ಬುಧವಾರ ನಡೆದಿದೆ.

ಪತಿ ಬೇಗ ಮಲಗಲಿ ಎಂಬ ಉದ್ದೇಶದಿಂದ ಬುಧವಾರ ರಾತ್ರಿ ಹೆಂಡತಿ ರೇಷ್ಮಾ ಸುಲ್ತಾನಾ ವೈಫೈ ಕನೆಕ್ಷನ್ ಸ್ವಿಚ್ ಅನ್ನು ಬಂದ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಗಂಡ, ಪತ್ನಿ ರೇಷ್ಮಾ ಸುಲ್ತಾನಾ ಮುಖಕ್ಕೆ ಬಲವಾಗಿ ಹೊಡೆದಿದ್ದಾನೆ.

ಗಾಯಗೊಂಡಿರುವ ರೇಷ್ಮಾಳನ್ನು ಹೈದರಾಬಾದಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ. ರೇಷ್ಮಾಳ ತಾಯಿ ಪೋಲೀಸರಿಗೆ ದೂರು ನೀಡಿದ್ದಾರೆ.

‘ ಅವರಿಬ್ಬರ ವೈವಾಹಿಕ ಜೀವನದಲ್ಲಿ ವೈಮನಸ್ಯವಿದ್ದು ಪ್ರಕರಣ ದಾಖಲಿಸಿ ಪತಿಯನ್ನು ಬಂಧಿಸುವ ಮೊದಲು ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ‘ ಎಂದು ಪೋಲೀಸ್ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com