ವಾರ್ನರ್ ಪತ್ನಿ ಬಗ್ಗೆ ಕ್ವಿಂಟನ್ ಡಿ ಕಾಕ್ ಟೀಕೆ : ಮೌನ ಮುರಿದ ಆಸೀ ಕ್ರಿಕೆಟರ್ ಹೇಳಿದ್ದೇನು..?

ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ವೇಳೆ ಕ್ವಿಂಟನ್ ಡಿ ಕಾಕ್ ಹಾಗೂ ಡೇವಿಡ್ ವಾರ್ನರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಡೇವಿಡ್ ವಾರ್ನರ್ ಗೆ ಪಂದ್ಯದ ಆದಾಯದ 75 % ಹಾಗೂ ಡಿ ಕಾಕ್ ಗೆ 25 % ದಂಡ ವಿಧಿಸಲಾಗಿತ್ತು.

ಆಸೀ ಓಪನಿಂಗ್ ಬ್ಯಾಟ್ಸಮನ್ ಡೇವಿಡ್ ವಾರ್ನರ್ ಪತ್ನಿಯ ಕುರಿತಾಗಿ ಕ್ವಿಂಟನ್ ಡಿ ಕಾಕ್ ಟೀಕೆ ಮಾಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಸ್ವತಃ ಡೇವಿಡ್ ವಾರ್ನರ್ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ್ದಾರೆ.

‘ ಪಂದ್ಯದ ವೇಳೆ ನಾನು ಸ್ವಲ್ಪ ಹೆಚ್ಚು ಅತಿರೇಕವಾಗಿ, ಭಾವನಾತ್ಮಕವಾಗಿ ವರ್ತಿಸಿದೆ. ಆದರೆ ಆಮೇಲೆ ನನಗೆ ಪಶ್ಚಾತ್ತಾಪವಾಯಿತು. ಅಭಿಮಾನಿಗಳಿಂದ, ಎದುರಾಳಿ ಆಟಗಾರರಿಂದ ಕೆಟ್ಟ ಮಾತುಗಳು ಕೇಳಿ ಬರುತ್ತವೆ. ಅವುಗಳಿಗೆಲ್ಲ ನಾನು ಒಗ್ಗಿ ಹೋಗಿದ್ದೇನೆ. ಆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ‘

‘ ಆದರೆ ನನ್ನ ಹೆಂಡತಿಯ ಬಗ್ಗೆ ಡಿ ಕಾಕ್ ಆಡಿದ ಮಾತುಗಳು ಅತ್ಯಂತ ಕೆಟ್ಟದಾಗಿ ಹಾಗೂ ಅಸಹ್ಯವಾಗಿತ್ತು. ನನ್ನ ಪರಿವಾರದ ಬಗ್ಗೆ ಕೆಟ್ಟ ಮಾತುಗಳು ಹಾಗೂ ಜನಾಂಗೀಯ ನಿಂದನೆಯನ್ನು ನಾನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ‘ ಎಂದು ವಾರ್ನರ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com