ಸಿದ್ರಾಮಯ್ಯನ ತಲೇಲಿ ಮೆದುಳಿಲ್ಲ, ಶುಗರ್ ಕೋಟೆಡ್ ಯೂರಿಯಾ ಗೊಬ್ಬರವಿದೆ : ಈಶ್ವರಪ್ಪ

ಬಾಗಲಕೋಟೆ : ಈಶ್ವರಪ್ಪ ತಲೆ ಇದೆಯೋ ಇಲ್ವೋ ಎಂಬುದನ್ನು ರಾಜ್ಯದ ಜನ ತೀರ್ಮಾನ ಮಾಡ್ತಾರೆ. ಸಿದ್ದರಾಮಯ್ಯನವ್ರ ತಲೇಲಿ ಮೆದುಳಿಲ್ಲ. ಶುಗರ್ ಕೋಟೆಡ್ ಯೂರಿಯಾ ಗೊಬ್ಬರವಿದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ನಾಯಕ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಭ್ರಷ್ಟರನ್ನ ಪಕ್ಷದಲ್ಲಿ ಇಟ್ಟುಕೊಳ್ಳಲ್ಲ ಅನ್ನೋ ಸಿಎಂ, ಅಶೋಕ್ ಖೇಣಿ, ಆನಂದ್ ಸಿಂಗ್, ನಾಗೇಂದ್ರರನ್ನ ಕಾಂಗ್ರೆಸ್ ಗೆ ಸೇರಿಸಿಕೊಳ್ತಾರೆ.25 ವರ್ಷದಿಂದ ಹಿಂದುಳಿದ- ದಲಿತರ ಅಭಿವೃದ್ದಿ ಮಾಡುವೆ ಎಂದು ಹೇಳಿದ್ದ ಸಿದ್ದರಾಮಯ್ಯ ಏನೂ ಮಾಡಿಲ್ಲ.ದೇವೆಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್ ಗೆ ಬಂದು ಸಿಎಂ ಆದ್ರು. ಸಿದ್ದರಾಮಯ್ಯ ಇದುವರೆಗೂ ಯಾವ ಅಭಿವೃದ್ಧಿ ಕೆಲಸ ಮಾಡಿಲ್ಲ. 5 ವರ್ಷದ ಬಜೆಟ್ ನಲ್ಲಿ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಜನ್ಮ ಸ್ಥಳಗಳಿಗೆ ಅನುದಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com