ಸಿದ್ದರಾಮಯ್ಯನವರೇ.. Every Holiday is not sunday… ನೆನಪಿಟ್ಟುಕೊಳ್ಳಿ : HDK

ಹಾಸನ : ಬಿಜೆಪಿಯವರು ಕರ್ನಾಟಕದಲ್ಲಿ ಸುಳ್ಳು ಹೇಳಿ ಅಧಿಕಾರ ಹಿಡಿಯಲು ಆಗಲ್ಲ. ಬಿಜೆಪಿಯವರು, ಯೋಗಿ ಆದಿತ್ಯನಾಥ್ ಪಾದಯಾತ್ರೆ ಮಾಡಬೇಕಿರುವುದು ಗುಜರಾತ್ ನಲ್ಲೇ ಹೊರತು ಕರ್ನಾಟಕದಲ್ಲಲ್ಲ .ಕಮಲನಾಯಕರ ನರಹಂತಕ ಯಾತ್ರೆ ಇಲ್ಲಿ ನಡೆಯಲ್ಲ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಮಹದಾಯಿ ಬಗ್ಗೆ ನಿಮ್ಮಲ್ಲಿ ಉತ್ತರ ಇಲ್ಲ. ರಾಜ್ಯ ಸರ್ಕಾರವೂ ಜನರಲ್ಲಿ ವಿಶ್ವಾಸ ಮೂಡಿಸಲು ವಿಫಲವಾಗಿದೆ ಎಂದಿರುವ ಅವರು, ಲೋಕಾಯುಕ್ತರಿಗೆ ರಕ್ಷಣೆ ಕೊಡಲಾಗದವರು ನಾಡಿನ ಜನರಿಗೆ ಹೇಗೆ ರಕ್ಷಣೆ ಕೊಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಎಚ್‌ಡಿಕೆ, ಭದ್ರತಾ ವ್ಯವಸ್ಥೆ ಬಗ್ಗೆ ಸಿಎಂ ಜನರಿಗೆ ಸ್ಪಷ್ಟನೆ ನೀಡಲಿ. ನಿನ್ನೆಯ ಘಟನೆಗೆ ಯಾರು ಹೊಣೆ? ಯಾರ ತಲೆದಂಡ ಆಗಬೇಕು ಹೇಳಲಿ?ನಿಮ್ಮ ಗೃಹ ಇಲಾಖೆ ಸಲಹೆಗಾರನ ಕೆಲಸ ಏನು ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ.

ಲೋಕಾಯುಕ್ತ ಕಚೇರಿಯಲ್ಲಿ ಮೆಟಲ್ ಡಿಕೆಕ್ಟರ್ ರಿಪೇರಿ ಮಾಡಿಸದಷ್ಟು ದರಿದ್ರ ಬಂದಿದೆಯೇ? ನಿಮಗೆ ಮರ್ಯಾದೆ ಇದ್ದರೆ ಗೃಹ ಸಚಿವರು ರಾಜೀನಾಮೆ ಕೊಡಲಿ. ಸಿದ್ದರಾಮಯ್ಯ ಅವರೇ ನೈತಿಕತೆ ಇದ್ದರೆ ನೀವೂ ರಾಜೀನಾಮೆ ನೀಡಿ ಎಂದಿದ್ದಾರೆ.

ಜೆಡಿಎಸ್ ಬಗ್ಗೆ ಮುಖ್ಯಮಂತ್ರಿ ಟೀಕೆ ಮಾಡಿದ್ದರ ಕುರಿತು ವಾಗ್ದಾಳಿ ನಡೆಸಿದ ಅವರು, ಆರೂವರೆ ಕೋಟಿ ಜನ ಇವರ ಜೇಬಲ್ಲಿ ಇದ್ದಾರಾ? ಈಗ ಜೆಡಿಎಸ್ ಜೊತೆ ಬೆಂಬಲ ಇಲ್ಲ ಅಂತೀರಿ. ನಂಜನಗೂಡು, ಗುಂಡ್ಲುಪೇಟೆ ಚುನಾವಣೆಯಲ್ಲಿ ನಾವು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವಾ? ನಿಮ್ಮ ಅಹಂಕಾರಕ್ಕೆ ಕಾಲವೇ ಉತ್ತರ ನೀಡಲಿದೆ. ಎವೆರಿ ಹಾಲಿಡೇ ಈಸ್ ನಾಟ್ ಸಂಡೇ ಸಿದ್ದರಾಮಯ್ಯ ನವರೇ..ಮುಂದಿನ ದಿನಗಳಲ್ಲಿ ಕಾದಿದೆ ಮಾರೀಹಬ್ಬ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com