ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರಿಗೆ ಇರಿದ ತೇಜರಾಜ್ ಶರ್ಮಾ ಯಾರು..?

ಬುಧವಾರ ಮಧ್ಯಾಹ್ನ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ನುಗ್ಗಿದ ತೇಜರಾಜ್ ಎಂಬ ವ್ಯಕ್ತಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಮೂರು ಬಾರಿ ಇರಿದಿದ್ದ. ಬಳಿಕ ವಿಧಾನಸೌಧ ಪೋಲೀಸರು ಆರೋಪಿಯನ್ನು ತಮ್ಮ ವಶಕ್ಕೆ ಪಡೆದಿದ್ದರು. ಆದರೆ ಈತ ಯಾರು..? ಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕುವಿನಿಂದ ಇರಿಯಲು ಕಾರಣವೇನು..?

ತೇಜ್​ರಾಜ್‌ ಶರ್ಮ ತುಮಕೂರಿನ ಹಲವು ವರ್ಷಗಳಿಂದ ವಾಸವಾಗಿದ್ದ. ಮೂಲತಃ ರಾಜಸ್ಥಾನದವನಾದ ಇವನು ಸರ್ಕಾರಿ ಕಚೇರಿಗಳಿಗೆ ಅಗತ್ಯವಿರುವ ಪೀಠೋಪಕರಣಗಳನ್ನು ತಯಾರಿಸಿ ಒದಗಿಸುವ ಕೆಲಸವನ್ನು ಮಾಡುತ್ತಿದ್ದ. ಇದೇ ವಿಚಾರದಲ್ಲಿ ಅಧಿಕಾರಿಗಳು ಹಾಗೂ ತೇಜರಾಜ್ ನಡುವೆ ಗೊಂದಲ ಸೃಷ್ಟಿಯಾಗಿತ್ತು.

ಬಾಲಕಿಯರ ಬಾಲಮಂದಿರದ ಮಂಚಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ತೆಜರಾಜ್ ಶರ್ಮಾ ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದಿದ್ದ. ತೇಜ್‌ ರಾಜ್‌ ಶರ್ಮಾ 18 ಅಧಿಕಾರಿಗಳ ವಿರುದ್ಧ ದೂರನ್ನೂ ಸಹ ನೀಡಿದ್ದ. ಆದರೆ ದಾಖಲೆ ಪರಿಶೀಲನೆ ಬಳಿಕ ಇದು ಸುಳ್ಳು ಕೇಸ್ ಅಂತ ಸಾಬೀತಾಗಿತ್ತು. ಇದೇ ಹಿನ್ನೆಲೆಯಲ್ಲಿ ಕೋಪಗೊಂಡ ತೇಜರಾಜ್, ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com