ಬಿಜೆಪಿಯವರೇ ನಿಜವಾದ ದೇಶದ್ರೋಹಿಗಳು ಹಾಗೂ ಭಯೋತ್ಪಾದಕರು : ರಾಮಲಿಂಗಾರೆಡ್ಡಿ

ಕಾಂಗ್ರೆಸ್ ಸಚಿವ ರಾಮಲಿಂಗಾ ರೆಡ್ಡಿ ಭಾರತೀಯ ಜನತಾ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ‘ ರಾಜ್ಯ ಬಿಜೆಪಿ ನಾಯಕರು ಒಂದೆಡೆ ಜನಸುರಕ್ಷಾ ಯಾತ್ರೆ ಎಂಬ ಗಿಮಿಕ್ ಪಾದ ಯಾತ್ರೆ ಹಮ್ಮಿಕೊಂಡಿದ್ದು ಇನ್ನೊಂದೆಡೆ ತ್ರಿಪುರಾ ರಾಜ್ಯದ ಗೆಲುವಿನ ಬಳಿಕ ಕರ್ನಾಟಕದಲ್ಲಿಯೂ ಅಧಿಕಾರದ ಹಗಲು ಕನಸು ಕಾಣಲು ಪ್ರಾರಂಭಿಸಿದ್ದಾರೆ. 30ಲಕ್ಷ ಜನಸಂಖ್ಯೆ ಇರುವ ತ್ರಿಪುರ ರಾಜ್ಯದ ಚುನಾವಣೆಯನ್ನು 6ಕೋಟಿ 30ಲಕ್ಷ ಜನಸಂಖ್ಯೆ ಇರುವ ಕರ್ನಾಟಕದ ಚುನಾವಣೆಗೆ ಹೋಲಿಸಲು ಮುಂದಾಗಿರುವುದು ಬಿಜೆಪಿಯವರ ಮೂರ್ಖತನ ಹಾಗೂ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ ‘

‘ ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ದೇಶದ್ರೋಹಿಗಳ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ತ್ರಿಪುರಾ,ನಾಗಾಲ್ಯಾಂಡ್ ಹಾಗೂ ಮೇಘಾಲಯದಲ್ಲಿಯೂ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ಬೆಂಬಲಿತ ಸಂಘಟನೆ ಹಾಗೂ ಪಕ್ಷಗಳೊಂದಿಗೆ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದವು ಇದೀಗ ಬಿಜೆಪಿಯ ಅಸಲಿ ದೇಶ ಭಕ್ತಿ ಏನೆಂಬುವುದು ಜಗಜ್ಜಾಹೀರಾಗಿದೆ. ದೇಶದ ಒಳಗೆ ನಕಲಿ ದೇಶ ಪ್ರೇಮ ಕಾಶ್ಮೀರ,ಈಶಾನ್ಯ ಭಾರತದಲ್ಲಿ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳೊಂದಿಗೆ ಸ್ನೇಹ ‘

‘ ಇನ್ನು ಕೇಂದ್ರ ಸರ್ಕಾರದ NCRB ಮಾಹಿತಿ ಪ್ರಕಾರ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ದೇಶದ ನಂ1 ಕ್ರೈಂ ರಾಜ್ಯ ಹಾಗೂ ಮಧ್ಯ ಪ್ರದೇಶ ದೇಶದ ನಂ1 ರೇಪ್ ಸಂತ್ರಸ್ಥರ ರಾಜ್ಯವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಂತೆ ಕರ್ನಾಟಕವನ್ನು ಹೇಗೆ ಕ್ರೈಂ ರಾಜ್ಯ ವನ್ನಾಗಿಸಬೇಕೆಂದು ಟ್ರೈನಿಂಗ್ ನೀಡಲು ಮಂಗಳೂರಿನ ಜನಸುರಕ್ಷಾ ಯಾತ್ರೆ ಗೆ ಆಗಮಿಸಿದ್ದಾರೆ ‘

‘ ರಾಜ್ಯದಲ್ಲಿ ಆರೇಳು ಬಾರಿ ಮೋದಿ ಬಂದರೂ ಇನ್ನೂ ರಾಜ್ಯದಲ್ಲಿ ಮೋದಿ ಅಲೆ ಏಳದ ಕಾರಣಕ್ಕಾಗಿ ಹತಾಶರಾಗಿರುವ ಬಿಜೆಪಿ ನಾಯಕರು ಇದೀಗ ಭಯೋತ್ಪಾದಕರ ರೀತಿಯಲ್ಲಿ ಭಾಷಣ ಮಾಡಿ ಜನಸಾಮಾನ್ಯರ ಜೀವನದಲ್ಲಿಯೂ ಆಟವಾಡಲು ಮುಂದಾಗಿದ್ದಾರೆ. ಬಸವಣ್ಣನ ನಾಡಿನಲ್ಲಿ ಮೋದಿ ಅಶಾಂತಿ ತಂತ್ರ ಫಲಿಸದು. ಬಿಜೆಪಿಯ ರಾಜಕೀಯ ಅವನತಿ ಕರ್ನಾಟಕದಿಂದಲೇ ಪ್ರಾರಂಭವಾಗಲಿದೆ ‘ ಎಂದಿದ್ದಾರೆ.

Leave a Reply

Your email address will not be published.