Birthday spl : ರಾಧಿಕಾ ಪಂಡಿತ್’ಗೆ ಹುಟ್ಟುಹಬ್ಬದ ಸಂಭ್ರಮ – ಮುದ್ದಿನ ಮಡದಿಗೆ ಅಂದದ ಗಿ‍ಫ್ಟ್ …

ಬೆಂಗಳೂರು : ನಟಿ ರಾಧಿಕಾ ಪಂಡಿತ್ ಅವರಿಗೆ ಇಂದು 34ನೇ ಹುಟ್ಟುಹಬ್ಬದ ಸಂಭ್ರಮ. ರಾಧಿಕಾ ತಮ್ಮ ಹುಟ್ಟು ಹಬ್ಬವನ್ನು   ತಮ್ಮ ಮನೆಯಲ್ಲಿ ಪತಿ ಯಶ್ ಕುಟುಂಬ ವರ್ಗದವರು ಮತ್ತು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಇಂದು ನಸುಕಿನ ಜಾವದಿಂದಲೇ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿಯ ಮನೆಯ ಹತ್ತಿರ ಜಮಾಯಿಸಿ ಮೊಗ್ಗಿನ ಮನಸ್ಸು ನಾಯಕಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ರಾಧಿಕಾ ಅವರು ಅಭಿಮಾನಿಗಳು ತಂದಿರುವ ಕೇಕನ್ನು ಕತ್ತರಿಸಿ ಹಂಚಿ ಸಂತೋಷಪಡುತ್ತಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ರಾಧಿಕಾ ಪಂಡಿತ್, ನನಗೆ ಬರ್ತ್‍ಡೇ ಆಚರಣೆ ಅಂದ್ರೆ ತುಂಬಾ ಕಾತರ ಇರುತ್ತದೆ. ಯಾಕಂದ್ರೆ ಆ ದಿನ ನಮಗೆ ಜಾಸ್ತಿ ಪ್ರಾಮುಖ್ಯತೆ ಇರತ್ತೆ. ಅಭಿಮಾನಿಗಳು ನಮ್ಮ ಹುಟ್ಟುಹಬ್ಬವನ್ನು ಆಚರಿಸುವಾಗ ಖುಷಿಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಖುಷಿಯಿಂದ ಹೇಳಿಕೊಂಡರು. ಮೊಗ್ಗಿನ ಮನಸ್ಸು ಕದ್ದ ಯಶ್ ನೀಡಿದ ಗಿಫ್ಟ್ ಬಗ್ಗೆ ರಾಧಿಕಾ ತುಟಿ ಬಿಚ್ಚಲಿಲ್ಲ…

Leave a Reply

Your email address will not be published.

Social Media Auto Publish Powered By : XYZScripts.com