ಟ್ರಕ್ ಬಳಸಿ ಪ್ರವೀಣ್ ತೊಗಾಡಿಯ ಕೊಲೆಗೆ ಯತ್ನ..? : ಆರೋಪ ಮಾಡಿದ VHP ಮುಖಂಡ

ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಮತ್ತೊಮ್ಮೆ ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಮಾರ್ಚ್ 7ರ ಬೆಳಿಗ್ಗೆ ಝೆಡ್ ಪ್ಲಸ್ ಭದ್ರತೆ ಜೊತೆ ವಡೋದರಾದಿಂದ ಸೂರತ್ ಗೆ ಹೊರಟಿದ್ದ ಪ್ರವೀತ್ ತೊಗಾಡಿಯಾ ಸ್ಕಾರ್ಪಿಯೋ ಕಾರಿಗೆ ಹಿಂದಿನಿಂದ ಲಾರಿಯೊಂದು ಗುದ್ದಿದೆ. ಪ್ರವೀಣ್ ತೊಗಾಡಿಯಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಸೂರತ್ ಬಳಿಯ ಕಾಮರಾಜ್ ತಲುಪಿದ ಪ್ರವೀಣ್ ತೊಗಾಡಿಯಾ ಇದು ಹತ್ಯೆ ಸಂಚು ಎಂದು ಆರೋಪ ಮಾಡಿದ್ದಾರೆ. ಸ್ಕಾರ್ಪಿಯೋ ಕಾರಿಗೆ ಹಿಂದಿನಿಂದ ಲಾರಿ ಗುದ್ದಿದೆ. ಸ್ವಲ್ಪ ದೂರ ಕಾರನ್ನು ಲಾರಿ ತಳ್ಳಿಕೊಂಡು ಹೋಗಿದೆ. ಆದ್ರೆ ಟ್ರಕ್ ಚಾಲಕ ಟ್ರಕ್ ನಿಲ್ಲಿಸುವ ಬದಲು ಎಕ್ಸ್ ಲೇಟರ್ ಒತ್ತಿದ್ದಾನೆ. ಗಾಡಿ ಬುಲೆಟ್ ಪ್ರೂಫ್ ಆಗಿದ್ದರಿಂದ ಪ್ರಾಣ ಉಳಿದಿದೆ ಎಂದು ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

ಕೇಂದ್ರ ಸರ್ಕಾರ, ಪ್ರವೀಣ್ ತೊಗಾಡಿಯಾರಿಗೆ ಝೆಡ್ ಪ್ಲಸ್ ಭದ್ರತೆ ಜೊತೆ ಬುಲೆಟ್ ಪ್ರೂಫ್ ಕಾರನ್ನು ನೀಡಿದೆ. ಘಟನೆ ನಡೆಯುವ ವೇಳೆ ಭದ್ರತಾ ಸಿಬ್ಬಂದಿ ಪ್ರವೀಣ್ ತೊಗಾಡಿಯ ಜೊತೆಗಿರಲಿಲ್ಲ ಎನ್ನಲಾಗಿದೆ.

Leave a Reply

Your email address will not be published.