ಮೊಹಮ್ಮದ್ ಶಮಿಯಿಂದ ಪತ್ನಿಗೆ ಕಿರುಕುಳ, ಮೋಸ.? : ಮಡದಿ ಹಸೀನ್ ಗಂಭೀರ ಆರೋಪ

ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಪತಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮೊಹಮ್ಮದ್ ಶಮಿ ತಮಗೆ ಕಿರುಕುಳ ನೀಡಿದ್ದಾಗಿಯೂ, ಅನ್ಯ ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಹಸೀನ್ ಜಹಾನ್ ಆರೋಪಿಸಿದ್ದಾರೆ.

ಬೇರೆ ಮಹಿಳೆಯರೊಂದಿಗೆ ಮೊಹಮ್ಮದ್ ಶಮಿ ನಡೆಸಿದ್ದಾರೆ ಎನ್ನಲಾದ ವಾಟ್ಸಾಪ್, ಮೆಸೆಂಜರ್ ಸಂಭಾಷಣೆಯ ಸ್ಕ್ರೀನ್ ಶಾಟ್ ಗಳನ್ನು ಹಸೀನ್ ಜಹಾನ್ ಹೆಸರಿನ ಫೇಸ್ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಲಾಗಿದೆ.

Image result for mohammed shami wife accused

Image result for mohammed shami wife accused

‘ ಶಮಿ ನನ್ನನ್ನು ನಿಂದಿಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮರಳಿದ ನಂತರ ನನಗೆ ಹೊಡೆದಿದ್ದಾರೆ. ಶಮಿ ಈ ರೀತಿ ಹಲವು ದಿನಗಳಿಂದ ಮಾಡುತ್ತಿದ್ದಾರೆ. ತಪ್ಪು ತಿದ್ದಿಕೊಳ್ಳುತ್ತಾರೆಂದು ಕಾದು ನೋಡಿದೆ, ಆದರೆ ಯಾವುದೂ ಪ್ರಯೋಜನಾವಗಿಲ್ಲ. ನನ್ನ ಪರಿವಾರ ಹಾಗೂ ಮಗಳ ಭವಿಷ್ಯದ ದೃಷ್ಟಿಯಿಂದ ಕೆಲದಿನ ನಾನು ಶಾಂತವಾಗಿ ವರ್ತಿಸಲು ಯತ್ನಿಸಿದೆ. ಆದರೆ ಇನ್ನು ನನ್ನಿಂದ ಸುಮ್ಮನಿರಲು ಸಾಧ್ಯವಿಲ್ಲ. ಲಭ್ಯವಿರುವ ಸಾಕ್ಷಿಗಳನ್ನು ಆಧರಿಸಿ ಅಧಿಕೃತ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ ‘ ಎಂದು ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

Image result for mohammed shami wife accused

ಆದರೆ ಈ ಎಲ್ಲ ಸುದ್ದಿಗಳೂ ನಿರಾಧಾರ ಎಂದಿರುವ ಮೊಹಮ್ಮದ್ ಶಮಿ, ನನ್ನ ವಿರುದ್ಧ ನಡೆಸಲಾಗುತ್ತಿರುವ ಸಂಚು ಎಂದು ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com