Central Jail : ಶಶಿಕಲಾಗೆ ರಾಜಾತಿಥ್ಯ ನೀಡಲು ಹೇಳಿಲ್ಲ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ..

ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ನಟರಾಜನ್ ಗೆ ರಾಜ್ಯಾತಿಥ್ಯ ನೀಡುವಂತೆ ಸಿಎಂ ಸುಚಿಸಿದ್ದರು ಎಂದು ನಿವೃತ್ತ ಎಡಿಜಿಪಿ ಸತ್ಯನಾರಾಯಣರಾವ್ ಮಾಹಿತಿ ಬಿಚ್ಚಿಟ್ಟ ಕುರಿತು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.


ಶಶಿಕಲಾಗೆ ವಿವಿಐಪಿ ಟ್ರಿಟ್ ಮೆಂಟ್ ಕೊಡಿ ಅಂತಾ ನಾನು ಹೇಳಿಲ್ಲ. ಜೈಲಿನ ನಿಯಮ ಪಾಲಿಸಿ ಎಂದು ಹೇಳಿದ್ದೆ ಅಷ್ಟೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ತಮಿಳುನಾಡು ನಿಯೋಗ ಭೇಟಿ ನೀಡಿತ್ತು. ಈ ವೇಳೆ ಚಾಪೆ ದಿಂಬು ಏಕೆ ನೀಡಿಲ್ಲ ಎಂದು ಪ್ರಶ್ನಿಸಿತ್ತು. ಹೀಗಾಗಿ ಜೈಲಿನ ನಿಯಮಗಳನ್ನು ಪಾಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆ ಅಷ್ಟೆ. ಆದರೆ ಚಾಪೆ ದಿಂಬು, ಬೆಡ್ ನೀಡಿ ಎಂದು ಹೇಳಿಲ್ಲ ಎಂದರು.

ಬಿಬಿಎಂಪಿಯಲ್ಲಿ ಜೆಡಿಎಸ್ ಮೈತ್ರಿ ಕಡಿದುಕೊಳ್ಲುವುದು ಅವರಿಗೆ ಬಿಟ್ಟ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com