Deodhar Trophy : ಫೈನಲ್ ತಲುಪಿದ ಕರ್ನಾಟಕ : ಮಿಂಚಿದ ಪವನ್, ಗೌತಮ್

ಮಂಗಳವಾರ ಧರ್ಮಶಾಲಾದಲ್ಲಿ ನಡೆದ ದೇವಧರ್ ಟ್ರೋಫಿಯ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡ ಇಂಡಿಯಾ ‘ಎ’ ವಿರುದ್ಧ 65 ರನ್ ಜಯಗಳಿಸಿ ಟೂರ್ನಿಯ ಫೈನಲ್ ತಲುಪಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ನಿಗದಿತ 50 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿತು. ಕರ್ನಾಟಕದ ರವಿಕುಮಾರ್ ಸಮರ್ಥ್ 85, ಪವನ್ ದೇಶಪಾಂಡೆ 95 ಹಾಗೂ ಸಿ ಎಮ್ ಗೌತಮ್ 49 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಇಂಡಿಯಾ ‘ಎ’ ತಂಡ 39.5 ಓವರುಗಳಲ್ಲಿ 274 ಕ್ಕೆ ಆಲೌಟ್ ಆಯಿತು. ಇಂಡಿಯಾ ‘ಎ’ ಪರವಾಗಿ ಉನ್ಮುಕ್ತ್ ಚಂದ್ 81, ಇಶಾನ್ ಕಿಶನ್ 73, ಪೃಥ್ವಿ ಷಾ 40 ರನ್ ಗಳಿಸಿದರು. ಕರ್ನಾಟಕದ ಕೆ.ಗೌತಮ್ 4, ರೋನಿತ್ ಮೋರೆ 3 ಹಾಗೂ ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು.

ಗುರುವಾರ ಮಾರ್ಚ್ 8 ರಂದು ಕರ್ನಾಟಕ ಹಾಗೂ ಇಂಡಿಯಾ ‘ಬಿ’ ತಂಡಗಳ ನಡುವೆ ಫೈನಲ್ ನಡೆಯಲಿದೆ.

Leave a Reply

Your email address will not be published.