Jail : ಶಶಿಕಲಾಗೆ ರಾಜಾತಿಥ್ಯ ನೀಡಲು ಸೂಚಿಸಿದ್ದವರ ಹೆಸರು ಹೇಳಿದ ನಿವೃತ್ತ ಎಡಿಜಿಪಿ ರಾವ್

ಬೆಂಗಳೂರು : ಅಕ್ರಮ ಆಸ್ತಿ ಹೊಂದಿದ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಗೆ ರಾಜಾತಿಥ್ಯ ನೀಡುವಂತೆ ಸೂಚನೆ ನೀಡಿದ್ದು ಸಿಎಂ ಸಿದ್ದರಾಮಯ್ಯನವರು ಎಂಬ ಸ್ಪೋಟಕ ಮಾಹಿತಿಯನ್ನು ನಿವೃತ್ತ ಎಡಿಜಿಪಿ ಸತ್ಯನಾರಾಯಣರಾವ್ ಹೊರ ಹಾಕಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾ ಅವರಿಗೆ ಕಾಟ್, ಬೆಡ್, ತಲೆದಿಂಬು ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದ್ದೆ. ಸರ್ಕಾರದ ನಿಯಮವನ್ನು ಪಾಲಿಸಿದ್ದೇನೆ ಅಷ್ಟೆ ಎಂದು ಹೆಚ್.ಎನ್.ಸತ್ಯನಾರಾಯಣ ರಾವ್ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಸಂಬಂಧ ಶಶಿಕಲಾಗೆ ಕ್ಲಾಸ್ ಒನ್ ಸೌಲಭ್ಯ ನೀಡಲು ಅವಕಾಶವಿಲ್ಲ ಎಂದು ಸೂಪರ್ ಡೆಂಟ್ ಗೂ ಹೇಳಿದ್ದೆ. ಶಶಿಕಲಾ ಜೈಲು ಸೇರಿ ಒಂದು ತಿಂಗಳು ಕಳೆದ ನಂತರ, ಸಿಎಂ ಸಿದ್ದರಾಮಯ್ಯನವರು ತಮ್ಮ ಖಾಸಗಿ ಸಹಾಯಕ ಪಿಎ ವೆಂಕಟೇಶ್ ಮೂಲಕ ನನ್ನನ್ನು ಕರ್ನಾಟಕ ವಿದ್ಯುತ್ ನಿಗಮ ಅತಿಥಿ ಗೃಹಕ್ಕೆ ಕರೆದು ಶಶಿಕಲಾಗೆ ಯಾವ ರೀತಿಯ ಸೌಲಭ್ಯ ನೀಡುತ್ತಿದ್ದೀರಿ ಎಂದು ಕೇಳಿದರು.


ಅವರಿಗೆ ವಿಶೇಷ ಸೌಲಭ್ಯಗಳೇನು ನೀಡುತ್ತಿಲ್ಲ, ಬೇರೆ ಮಹಿಳಾ ಕೈದಿಗಳಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದೆ. ಅದಕ್ಕೆ ಸಿಎಂ ಸಿದ್ದರಾಮಯ್ಯನವರು ಶಶಿಕಲಾಗೆ ಜೈಲಿನಲ್ಲಿ , ಬೆಡ್, ತಲೆದಿಂಬು, ನೀಡುವಂತೆ ಸೂಚನೆ ನೀಡಿದ್ದರು. ಅವರ ಸೂಚನೆ ಪ್ರಕಾರ ನಾನು ನಡೆದುಕೊಂಡೆಯಷ್ಟೆ. ಸರ್ಕಾರಕ್ಕೆ ಈ ವಿಷಯದಲ್ಲಿ ಅಧಿಕಾರವಿದೆ. ಕಾಟ್, ಬೆಡ್ ಬಿಟ್ಟು ಬೇರೇನನ್ನೂ ನೀಡದಂತೆಯೂ ಮುಖ್ಯಮಂತ್ರಿಯವರು ನನಗೆ ಹೇಳಿದ್ದರು ಎಂದು ನಾರಾಯಣ ರಾವ್ ತಿಳಿಸಿದ್ದಾರೆ.

ಅಕ್ರಮ ಆಸ್ತಿ ಗಳಿಗೆ ಕೇಸಿನಲ್ಲಿ ತಮಿಳುನಾಡಿನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ,ಶಶಿಕಲಾ ಅವರಿಗೆ ಜೈಲು ಶಿಕ್ಷೆಯಾಗಿದ್ದು ಬೆಂಗಳೂರಿನ ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿದ್ದಾರೆ. ಶಶಿಕಲಾ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಆಗಿನ ಡಿಐಜಿ(ಕಾರಾಗೃಹ) ಡಿ.ರೂಪಾ ಆರೋಪಿಸಿ ವರದಿ ಸಲ್ಲಿಸಿದ್ದರು.

ಶಶಿಕಲಾಗೆ ಜೈಲಿನಲ್ಲಿ ಸೌಲಭ್ಯ ನೀಡಲು 2 ಕೋಟಿ ರೂಪಾಯಿ ಲಂಚ ಪಡೆಯಲಾಗಿದೆ ಇದರಲ್ಲಿ ಸತ್ಯನಾರಾಯಣ ರಾವ್ ಅವರ ಪಾತ್ರವಿದೆ ಎಂದು ರೂಪಾ ಆರೋಪಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಆರೋಪದ ಬಗ್ಗೆ ತನಿಖೆ ನಡೆಸಲು ಐಎಎಸ್ ಅಧಿಕಾರಿ ವಿಜಯ್ ಕುಮಾರ್ ನೇತೃತ್ವದಲ್ಲಿ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com