ಸಿದ್ದರಾಮಯ್ಯ ಹೆಸರು ಕೇಳಿದ್ರೆ ಮೋದಿಗೆ ನಡುಕ ಉಂಟಾಗುತ್ತೆ : ಸಿ.ಎಂ ಇಬ್ರಾಹಿಂ

ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ ಮೋದಿ ಹಾಗೂ ಅಮಿತ್ ಷಾರನ್ನ ಯೆಡಿಯೂರಪ್ಪನವರು ರಾಜ್ಯಕ್ಕೆ ಕರೆತಂದು ಗಿರಕಿ ಹೊಡೆಸುತ್ತಿದ್ದಾರೆ. ಎಷ್ಟೇ ಬುಗರಿ ತಿರುಗಿಸಿದ್ರೂ ರಾಜ್ಯದಲ್ಲಿ ನಿಮ್ಮ ಆಟ ನಡೆಯಲ್ಲ ‘ ಎಂದಿದ್ದಾರೆ.

ಸಿದ್ದರಾಮಯ್ಯರನ್ನ ತಾಯಿ ಚಾಮುಂಡೇಶ್ವರಿ ವಾಪಸ್ ಕರೆದಿದ್ದಾಳೆ ಅನಿಸುತ್ತೆ ಅದಕ್ಕಾಗಿ ಹಿಂದಿನ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾತ್ರಿ ೧೨ ಗಂಟೆ ಆದ್ರೆ ಸಾಕು ಸಿದ್ದರಾಮಯ್ಯ ಹೆಸರು ಕೇಳಿದ್ರೆ ಮೋದಿ ಎದ್ದು ಕೂರ್ತಾರೆ. ಸಿದ್ದರಾಮಯ್ಯ ನ ಹೆಸರು ಕೇಳಿದ್ರೆ ಮೋದಿಗೆ ನಡುಕ ಉಂಟಾಗುತ್ತೆ.

ಈ ದಿನ ಜನಕ್ಕೆ ಬೇಕಿರೋದು ದೇಶ್ ಕೀ ಬಾತ್ ಹೊರತು ಮನ್ ಕೀ ಬಾತ್ ಅಲ್ಲ. ಮನ್ ಕೀ ಬಾತ್ ಕೇವಲ ಪ್ರೇಮಿಗಳಿಗಾಗಿ ಇರೋದು. ದೇಶಕ್ಕಾಗಿ ಎಲ್ಲವನ್ನೂ ಬಿಟ್ಟು ಬಂದೆ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಇಬ್ರಾಹಿಂ ‘ ಯಾವ ಆಸ್ತಿ ಬಿಟ್ಟು ಬಂದ್ರೀ..? ಏನಾದ್ರೂ ಬಿಟ್ಟಿದ್ರೆ ಯಶೋದಮ್ಮಾಗೆ ಬಿಟ್ಟಿರಬಹುದು ‘ ಎಂದು ವ್ಯಂಗ್ಯವಾಡಿದ್ದಾರೆ.

One thought on “ಸಿದ್ದರಾಮಯ್ಯ ಹೆಸರು ಕೇಳಿದ್ರೆ ಮೋದಿಗೆ ನಡುಕ ಉಂಟಾಗುತ್ತೆ : ಸಿ.ಎಂ ಇಬ್ರಾಹಿಂ

  • March 6, 2018 at 5:18 PM
    Permalink

    ನೀನು ಗೆದ್ದ ಬಾ ಸಿ ಎಂ ಹಿಂಬಾಗಾ

    Reply

Leave a Reply

Your email address will not be published.

Social Media Auto Publish Powered By : XYZScripts.com