ಭ್ರಷ್ಟ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ : BSY ಸವಾಲ್

‘ ಸಿಎಂ ಸಿದ್ದರಾಮಯ್ಯ ಒಬ್ಬ ಭ್ರಷ್ಟ ಮುಖ್ಯಮಂತ್ರಿ ಈ ಬಾರಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ‘ ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಬಹಿರಂಗ ಸವಾಲ್ ಹಾಕಿದ್ದಾರೆ.

‘ ಭ್ರಷ್ಟರು ಯಾರು ಅಂತ ಬಹಿರಂಗ ಚರ್ಚೆಗೆ ಕರೆ ನೀಡಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್ ವೈ. ನಾನು ಅವರ ಬಳಿ ಯಾವುದೇ ಬಹಿರಂಗ ಚರ್ಚೆಗೆ ಹೋಗೋಲ್ಲ. ಅವರಿಗೆ ನನ್ನ ಬಳಿ ಮಾತನಾಡು ನೈತಿಕತೆ ಇಲ್ಲ. ಅವರು ಮಾಡಿರು ಹಗರಣಗಳ ಬಗ್ಗೆ ಈಗಾಗಲೇ ಚಾರ್ಚ್ ಶೀಟ್ ಪ್ರಿಂಟ್ ಮಾಡಿ ಹಂಚುತಿದ್ದೇವೆ ‘

ಸಿದ್ದರಾಮಯ್ಯ ರಾಜ್ಯದ ಕಾಂಗ್ರೆಸ್ ಕೋನೆ ಮುಖ್ಯಂತ್ರಿ, ಅವರು ಕಾಂಗ್ರೆಸ್ ನ ಮುಳುಗಿಸಿ ಹೋಗ್ತಾರೆ. ಪ್ರಧಾನಿಗಳ ಕಾಂಗ್ರೆಸ್ ಮುಕ್ತ ಭಾರತ ನಮ್ಮ ಧ್ಯೇಯ ಅದನ್ನು ಮಾಡ್ತಿದೇವೆ. ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಇರೋದು ಇಲ್ಲಿಯೋ ಬಾರಿ ನಾವೇ ಅಧಿಕಾರಕ್ಕೆ ಬರ್ತಿವಿ ‘

‘ ರಾಹುಲ್ ಗಾಂಧಿ ಹೋದಕಡೆಯಲ್ಲ ಕಾಂಗ್ರೆಸ್ ನೆಲ ಕಚ್ಚಿದೆ ದಯವಿಟ್ಟು ಚಾಮರಾಜನಗರ ಕ್ಷೇತ್ರಕ್ಕೂ ಕರೆದುಕೊಂಡು ಬರ್ಲಿ. ರೈತರ ಭೂಮಿ ಲೂಟಿ ಮಾಡಿದ ಖೇಣಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಕೂಡ ಬಹಳ ಹೋರಾಟ ಮಾಡಿದ್ದರು ‘ ಎಂದಿದ್ದಾರೆ.

‘ ಉಪೇಂದ್ರ ಬಿಜೆಪಿ ಸೇರುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ‘ ಎಂದು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com