ಮೈಸೂರು : ಕರೆಗೆ ಈಜಲು ಹೋದ ನಾಲ್ವರು ಯುವಕರು ಜಲ ಸಮಾಧಿ

ಮೈಸೂರು : ಹುಣಸೂರು ತಾಲೂಕು ಹೈರಿಗೆ ಕೆರೆಯಲ್ಲಿ ಈಜಲು ಹೋಗಿ ನಾಲ್ಕು ಮಂದಿ ಯುವಕರು ಜಲ ಸಮಾಧಿ ಯಾಗಿದ್ದಾರೆ. ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾಮದ ರಮೇಶ ರ ಪುತ್ರ ಸುನೀಲ್ (೧೮) ಹಾಗೂ ಮೂರು ಹುಣಸೂರು ನಗರದ ಯುವಕರೆಂದು ತಿಳಿದು ಬಂದಿದೆ.

ಅಜಯ್, ಯಶವಂತ್ ಎಂಬ ಇಬ್ಬರು ಸ್ಥಳೀಯರ ಜೊತೆ ಮತ್ತಿಬ್ಬರು ಸ್ನೇಹಿತರು ತೆರಳಿದ್ದರು. ಕೆರೆಯಲ್ಲಿ ಈಜಾಡುತ್ತಿದ್ದಾಗ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಕೆರೆಯ ದಡದಲ್ಲಿ ನಾಲ್ಕು ವಾಚು, ನಾಲ್ಕು ಮೊಬೈಲ್ ಪತ್ತೆಯಾಗಿವೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಹುಣಸೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ನಾಪತ್ತೆಯಾಗಿರುವ ಮಕ್ಕಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ನುರಿತ ಈಜುಗಾರರಿಂದಲೂ ಕೆರೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳದಲ್ಲಿ ಮಕ್ಕಳ ಪೋಷಕರು ಆತಂಕಗೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com