ಸಿದ್ದರಾಮಯ್ಯ ಅಂತ ತಪ್ಪಾಗಿ ಹೆಸರು ಇಟ್ಟಿದಾರೆ, ಸಿದ್ದ ರೆಹಮಾನ್ ಆಗ್ಬೇಕಿತ್ತು : ಈಶ್ವರಪ್ಪ

ಉಡುಪಿಯ ಕಿನ್ನಿಮೂಲ್ಕಿಯಲ್ಲಿ ಜನಸುರಕ್ಷಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಕೆಎಸ್ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.’ ಸಿದ್ದರಾಮಯ್ಯ ಅಂತ ತಂದೆ ತಾಯಿ ತಪ್ಪಾಗಿ ಹೆಸರಿಟ್ಟಿದ್ದಾರೆ. ಸಿದ್ದು ರೆಹಮಾನ್ ಅಂತ ಹೆಸರಿಡಬೇಕಿತ್ತು. ಸಿದ್ದರಾಮಯ್ಯ ದೇವೇಗೌಡರಿಗೆ ಟೋಪಿ ಹಾಕಿದ್ದೀರಿ. ಆರ್ ಎಸ್ ಎಸ್ ಬ್ಯಾನ್ ಮಾಡೋ ಕನಸನ್ನು ಬಿಟ್ಟುಬಿಡಿ ‘ ಎಂದಿದ್ದಾರೆ.

‘ ಮಠ ಮಂದಿರ ಸಿದ್ದರಾಮಯ್ಯ ನ ಅಪ್ಪನ ಮನೆ ಆಸ್ತಿನಾ? ನಾನು ಶ್ರೀಕೃಷ್ಣನ ಕ್ಷೇತ್ರದಲ್ಲಿ ಮಾತನಾಡುತ್ತಿದ್ದೇನೆ. ಕೊರಟಗೆರೆಯಲ್ಲಿ ಸಿದ್ದರಾಮಯ್ಯ ಪರಮೇಶ್ವರ್ ನ ಸೋಲಿಸಿದರು ‘ ಎಂದರು.

ಸಿದ್ದರಾಮಯ್ಯ ಲಾಟರಿ ಮುಖ್ಯಮಂತ್ರಿ. ಬಿಜೆಪಿ- ಕೆಜೆಪಿ ಒಡೆದು ಹೋಗಿ ಕಾಂಗ್ರೆಸ್ ಸರ್ಕಾರ ಬಂತು. ಸಿದ್ದರಾಮಯ್ಯ , ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ ‘ ಎಂದು ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com