21ನೇ ವಸಂತಕ್ಕೆ ಕಾಲಿಟ್ಟ ಶ್ರೀದೇವಿ ಪುತ್ರಿ Janhvi Kapoor : ಶುಭಾಶಯ ಕೋರಿದ ಸೋನಂ

ಇತ್ತೀಚೆಗೆ ದುಬೈನಲ್ಲಿ ಆಕಸ್ಮಿಕವಾಗಿ ನಿಧನರಾದ ಬಾಲಿವುಡ್ ಸೂಪರ್ ಸ್ಟಾರ್ ಶ್ರೀದೇವಿ ಅವರ ಹಿರಿಯ ಪುತ್ರಿ ಜಾಹ್ನವಿ ಕಪೂರ್ 21ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಅಮ್ಮನನ್ನು ಕಳೆದುಕೊಂಡಿರುವ ಆಘಾತದಲ್ಲಿರುವ ಜಾಹ್ನವಿ ಪಾಲಿಗೆ ಈ ಜನ್ಮದಿನ ಅಷ್ಟೊಂದು ಸಂತಸದಾಯಕವಾಗಿಲ್ಲ ಎಂದೇ ಹೇಳಬಹುದು. ಆದರೂ ಬದುಕಿದ್ದಾಗ ಅಮ್ಮ ಶ್ರೀದೇವಿ ಕಲಿಸಿದ ರೂಢಿಯಂತೆ ಜಾಹ್ನವಿ ಅನಾಥಾಶ್ರಮಕ್ಕೆ ಮಕ್ಕಳೊಂದಿಗೆ ತೆರಳಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

Image result for janhvi kapoor shridevi

Image result for janhvi kapoor shridevi

ಜಾಹ್ನವಿಗೆ ಸೋದರಿಯೂ ಆಗಿರುವ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ. ಸೋನಮ್ ಇನ್ಸ್ಟಾಗ್ರಾಮ್ ನಲ್ಲಿ ‘ ನಾನು ಕಂಡ ಅತ್ಯಂತ ದಿಟ್ಟ ಹುಡುಗಿಯರಲ್ಲಿ ಒಬ್ಬಳಾದ ಜಾಹ್ನವಿ, ಇಂದು ಒಬ್ಬ ಮಹಿಳೆಯಾಗಿದ್ದಾಳೆ, ಹ್ಯಾಪಿ ಬರ್ತ್ ಡೇ ಜಾನು ‘ ಎಂದು ಶುಭಾಶಯ ತಿಳಿಸಿದ್ದಾರೆ.

Image result for janhvi kapoor shridevi

Related image

ಜಾಹ್ನವಿ ಅಭಿನಯಿಸಿರುವ ಮೊದಲ ಚಿತ್ರ ‘ಧಡಕ್’ ನ ಚಿತ್ರೀಕರಣ ಪೂರ್ಣಗೊಂಡಿದ್ದು ಇದೇ ವರ್ಷದ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಸೋದರ ಇಶಾನ್ ಖಟ್ಟರ್ ನಾಯಕನಾಗಿ ನಟಿಸಿದ್ದಾರೆ.

Leave a Reply

Your email address will not be published.