ಮೋದಿ ಟೀಕೆ ಮಾಡದಿದ್ದರೆ ಸಿದ್ದರಾಮಯ್ಯಗೆ ನಿದ್ದೇನೆ ಬರಲ್ಲ : ಜಗದೀಶ್ ಶೆಟ್ಟರ್

ಕಾಪು ಜನಸುರಕ್ಷಾ ಯಾತ್ರೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗಧೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ‘ ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕೆಟ್ಟ ನಡವಳಿಕೆಯ, ಅಹಂಕಾರಿ, ದುರಹಂಕಾರಿ ಮುಖ್ಯಮಂತ್ರಿ ಇದ್ರೆ ಅದು ಸಿದ್ದರಾಮಯ್ಯ ‘ ಎಂದಿದ್ದಾರೆ.

‘ ನರೇಂದ್ರ ಮೋದಿಗೆ ಟೀಕೆ ಮಾಡದಿದ್ರೆ ಸಿದ್ದರಾಮಯ್ಯಗೆ ನಿದ್ದೆ ಬರಲ್ಲ. ಆದ್ರೆ ಅದರಿಂದ ಹಾನಿ ಆಗೋದು ಕಾಂಗ್ರೆಸ್ ಗೆ. ರಾಹುಲ್ ಎಷ್ಟು ಸಲ ಬಂದ್ರೂ ಸ್ವಾಗತ , ಅವರು ಹೋದಲ್ಲೆಲ್ಲ ಕಾಂಗ್ರೆಸ್ ಸೋಲುತ್ತೆ. ಕಾಂಗ್ರೆಸ್ ಗೆ ಈಗ ಗುಡಿ ಗುಂಡಾರ ನೆನಪಾಗಿದೆ ‘ ಅಂದಿದ್ದಾರೆ.

‘ ಹಿಂದುಗಳಿಗೆ ರಕ್ಷಣೆ ನೀಡೋದು ಸಿದ್ದರಾಮಯ್ಯರಿಗೆ ಸಾಧ್ಯ ಆಗಿಲ್ಲ. ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಐದಾರು ಬಾರಿ ಬಂದವರು ಕೃಷ್ಣಮಠಕ್ಕೆ ಬಂದಿಲ್ಲ. ರಾಹುಲ್ ಬಂದರೆ ಬರ್ತಾರಾ? ‘ ಎಂದು ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published.