ಕೊಹ್ಲಿಯನ್ನು ನೋಡಿದರೆ ರವಿ ಶಾಸ್ತ್ರಿಗೆ ಈ Pak ಆಟಗಾರನ ನೆನಪಾಗುತ್ತಂತೆ..!

ಯಶಸ್ವೀ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮರಳಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ನಿದಾಹಾಸ್ ಟ್ರೋಫಿ ಟಿ20 ತ್ರಿಕೋನ ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

ವಿರಾಟ್ ಬಗ್ಗೆ ಮುಖ್ಯ ಕೋಚ್ ರವಿ ಶಾಸ್ತ್ರಿ ಸೋಮವಾರ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ‘ ಕೊಹ್ಲಿ ಪಾಲಿಗೆ ಇವು ಇನ್ನೂ ಆರಂಭದ ದಿನಗಳು. ವಿರಾಟ್ ಇನ್ನೂ ವಯಸ್ಸಿನಲ್ಲಿ ತುಂಬಾ ಚಿಕ್ಕವರು. ಆದರೆ ಈಗಾಗಲೇ ಜಗತ್ತಿನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ವಿರಾಟ್ ಅವರನ್ನು ನೋಡಿದರೆ ಪಾಕ್ ಮಾಜಿ ನಾಯಕ ಇಮ್ರಾನ್ ಅವರೇ ನೆನಪಾಗುತ್ತಾರೆ ‘ ಎಂದಿದ್ದಾರೆ.

Image result for virat kohli imran khan

‘ ಯಾವಗಲೂ ಪ್ರಾಬಲ್ಯ ಮೆರೆಯಬೇಕೆಂಬ ಬಯಕೆ, ಎಂತಹುದೇ ಸ್ಥಿತಿಯಲ್ಲೂ ಸ್ಪರ್ಧಾತ್ಮಕ ಮನೋಭಾವ, ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಈ ಸಕಾರಾತ್ಮಕತೆ ತಂಡದ ಇತರ ಆಟಗಾರರ ಮೇಲೂ ಪರಿಣಾಮ ಬೀರುತ್ತದೆ. ಈ ಎಲ್ಲ ಗುಣಗಳಿಂಧಾಗಿ ಕೊಹ್ಲಿ ಪಾಕ್ ಮಾಜಿ ಆಲ್ರೌಂಡರ್ ಇಮ್ರಾನ್ ಖಾನ್ ಅವರನ್ನೇ ಹೊಲುತ್ತಾರೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.