WATCH : Quinton De Kock ಜೊತೆ ಜಗಳಕ್ಕೆ ನಿಂತ ವಾರ್ನರ್ : CCTV ಯಲ್ಲಿ ದೃಶ್ಯ ಸೆರೆ

ಪ್ರವಾಸಿ ಆಸ್ಟ್ರೇಲಿಯಾ ಹಾಗೂ ಆತಿಥೇಯ ದಕ್ಷಿಣ ಆಫ್ರಿಕಾ ತಂಡಗಳ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದು, ಈಗಾಗಲೇ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿರುವ ಕಾಂಗರೂ ಬಳಗ 1-0 ಮುನ್ನಡೆ ಸಾಧಿಸಿದೆ.

ಡರ್ಬನ್ ನ ಕಿಂಗ್ಸ್ ಮೇಡ್ ಅಂಗಳದಲ್ಲಿ ನಡೆದ ಮೊದಲ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟ್ಸಮನ್ ಕ್ವಿಂಟನ್ ಡಿ ಕಾಕ್ ಹಾಗೂ ಆಸೀ ತಂಡದ ಆರಂಭಿಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ನಡುವೆ ಮಾತಿನ ಚಕಮಕಿ ನಡೆದಿತ್ತು.

ನಾಲ್ಕನೇ ದಿನದ ಟೀ ವಿರಾಮದ ವೇಳೆ ಉಭಯ ತಂಡದ ಆಟಗಾರರು ಡ್ರೆಸಿಂಗ್ ರೂಮಿಗೆ ತೆರಳುವಾಗ ವಾರ್ನರ್-ಡಿ ಕಾಕ್ ಮಧ್ಯದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ವಾರ್ನರ್ ಡಿ ಕಾಕ್ ಅವರತ್ತ ಮುನ್ನುಗ್ಗುತ್ತಿರುವ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

Leave a Reply

Your email address will not be published.

Social Media Auto Publish Powered By : XYZScripts.com