Devdhar Trophy : ಆರ್. ಸಮರ್ಥ್ ಶತಕ : ಇಂಡಿಯಾ ‘ಬಿ’ ವಿರುದ್ಧ ಕರ್ನಾಟಕಕ್ಕೆ ಜಯ

ಸೋಮವಾರ ಧರ್ಮಾಶಾಲಾದಲ್ಲಿ ನಡೆದ ದೇವಧರ್ ಟ್ರೋಫಿಯ ಎರಡನೇ ಏಕದಿನ ಪಂದ್ಯದಲ್ಲಿ ಇಂಡಿಯಾ ‘ಬಿ’ ತಂಡದ ವಿರುದ್ಧ ಕರ್ನಾಟಕ 6 ರನ್ ರೋಚಕ ಜಯ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ನಿಗದಿತ 50 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 296 ರನ್ ಕಲೆಹಾಕಿತು. ಭರ್ಜರಿ ಶತಕ ಸಿಡಿಸಿದ ಆರ್.ಸಮರ್ಥ್ 117 ರನ್ ಗಳಿಸಿದರು. ಪವನ್ ದೇಶಪಾಂಡೆ 46 ಹಾಗೂ ಮಯಂಕ್ ಅಗರವಾಲ್ 44 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ‘ಬಿ’ ತಂಡ 50 ಓವರುಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 290 ರನ್ ಗಳಿಸಲಷ್ಟೇ ಶಕ್ತವಾಯಿತು. ಶತಕ ಬಾರಿಸಿದ ಮನೋಜ್ ತಿವಾರಿ 120 ರನ್ ಗಳಿಸಿದರಾದರೂ ಗೆಲುವು ಪಡೆಯಲಾಗಲಿಲ್ಲ. ಕರ್ನಾಟಕದ ಶ್ರೇಯಸ್ ಗೋಪಾಲ್ 3, ಪ್ರಸಿಧ್ ಕೃಷ್ಣಾ 2 ವಿಕೆಟ್ ಪಡೆದರು.

 

Leave a Reply

Your email address will not be published.