Tripura : ಲೆನಿನ್ ಪ್ರತಿಮೆ ಕೆಡವಿದ BJP ಬೆಂಬಲಿಗರು : CPM ಕಚೇರಿ ಮೇಲೆ ದಾಳಿ
ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಮಿತ್ರ ಪಕ್ಷಗಳು ಐತಿಹಾಸಿಕ ಗೆಲುವು ಸಾಧಿಸಿದ್ದರಿಂದ, 20 ವರ್ಷಗಳಿಂದ ಆಳ್ವಿಕೆ ನಡೆಸುತ್ತಿದ್ದ ಮಾಣಿಕ್ ಸರ್ಕಾರ್ ನೇತೃತ್ವದ ಸಿಪಿಎಂ ಪಕ್ಷ ಮುಖಭಂಗ ಎದುರಿಸಿತ್ತು. ಚುನಾವಣೆಯ ಫಲಿತಾಂಶದ ನಂತರ ಕಳೆದ 48 ಗಂಟೆಗಳ ಅವಧಿಯಲ್ಲಿ ಬಿಜೆಪಿ ಹಾಗೂ ಎಡಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ಆರಂಭಗೊಂಡಿದೆ.
ದಕ್ಷಿಣ ತ್ರಿಪುರಾದ ಬೆಲೋನಿಯಾ ಪಟ್ಟಣದಲ್ಲಿ ಸ್ಥಾಪಿಸಲಾಗಿದ್ದ ರಷ್ಯನ್ ಕ್ರಾಂತಿಕಾರಿ ಲೆನಿನ್ ಪ್ರತಿಮೆಯನ್ನು ಬುಲ್ಡೋಜರ್ ಸಹಾಯದಿಂದ ಕೆಡವಲಾಗಿದೆ. ಘಟನೆಗೆ ಸಾಕ್ಷಿಯಾದ ಸ್ಥಳೀಯರ ಪ್ರಕಾರ ಈ ಬುಲ್ಡೋಜರ್ ನ್ನು ಬಿಜೆಪಿ ಬೆಂಬಲಿಗರೇ ಸ್ಥಳಕ್ಕೆ ತಂದಿದ್ದರೆಂದು ಹೇಳಲಾಗುತ್ತಿದೆ. ಅಲ್ಲದೇ ಬೆಂಬಲಿಗರು ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಿದ್ದರು.