ಮುಲಾಯಂ ರಾವಣ, ಮಾಯಾವತಿ ಶೂರ್ಪನಖಿ, ಮೋದಿ ಮಾತ್ರ ರಾಮ ಎಂದ BJP ಸಚಿವ

ಲಖನೌ : ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ , ಸಮಾಜವಾದಿ ಪಕ್ಷದ ಜೊತೆ  ಕೈಜೋಡಿಸಲು ಮುಂದಾಗಿರುವುದಕ್ಕೆ ಬಿಜೆಪಿ ಸಚಿವರೊಬ್ಬರು ಗರಂ ಆಗಿದ್ದಾರೆ.

ಅಲಹಾಬಾದ್‌ನ ಪ್ರೀತಂ ನಗರದಲ್ಲಿ ಉತ್ತರ ಪ್ರದೇಸ ನಾಗರಿಕ ವಿಮಾನಯಾನ ಸಚಿವ ನಂದ ಗೋಪಾಲ್‌ ಗುಪ್ತಾ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು, ಈ ವೇಳೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಕಲಿಯುವಗ ರಾವಣನಂತೆ, ಇವರೊಂದಿಗೆ ಕೈಜೋಡಿಸುತ್ತಿರುವ ಮಾಯಾವತಿ ಶೂರ್ಪನಖಿ ಎಂದು ಟೀಕಿಸಿದ್ದಾರೆ.

ಇದೇ ವೇಳೆ ಮೋದಿಯನ್ನ ಶ್ರೀರಾಮ ಎಂದು ಸಂಬೋಧಿಸಿದ್ದು, ಯೋಗಿ ಆದಿತ್ಯನಾಥ್‌ ಹನುಮಂತನಂತೆ, ಮುಲಾಯಂ ಸಿಂಗ್‌ ಯಾದವ್‌ ಪುತ್ರ ಅಖಿಲೇಶ್‌ ಯಾದವ್‌ ಮೇಘನಾದನಂತೆ. ದೆಹಲಿ ಸಿಎಂ ಕೇಜ್ರಿವಾಲ್‌ರನ್ನು ಮಾರೀಚನಿಗೆ ಹೋಲಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com