ಅವಳಿ ಗಂಡು ಮಕ್ಕಳ ತಾಯಿಯಾದ Sunny Leone : ಸಂತಸ ಹಂಚಿಕೊಂಡ ದಂಪತಿ

ಬಾಲಿವುಡ್ ನಟಿ ಸನ್ನಿ ಲಿಯೋನ್ ಅವಳಿ-ಜವಳಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಾರೆ. ಹೌದು, ಮಾಜಿ ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೆಬರ್ ದಂಪತಿ ಮತ್ತೆ ತಂದೆ ತಾಯಿಯಾಗಿದ್ದಾರೆ.

ಈ ಎರಡು ಗಂಡು ಮಕ್ಕಳು ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ಅವರ ಜೈವಿಕ ಮಕ್ಕಳೇ ಆಗಿವೆ. ಆದರೆ ಈ ಮಕ್ಕಳಿಗೆ ಸ್ವತಃ ಸನ್ನಿ ಲಿಯೋನ್ ಜನ್ಮ ನೀಡಿಲ್ಲ, ಬದಲಾಗಿ ಬಾಡಿಗೆ ತಾಯಿಯೊಬ್ಬರು ಜನ್ಮ ನೀಡಿದ್ದಾರೆ.

ಆ ಎರಡು ಗಂಡು ಮಕ್ಕಳಿಗೆ ನೋಹ ಸಿಂಗ್ ವೆಬರ್ ಹಾಗೂ ಅಶೆರ್ ಸಿಂಗ್ ವೆಬರ್ ಎಂದು ಹೆಸರಿಟ್ಟಿದ್ದಾರೆ. ಈ ಸಂತಸದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸನ್ನಿ ಲಿಯೋನ್ ಹಾಗೂ ವೆಬರ್ ದಂಪತಿ ಈಗ ನಮ್ಮ ಪರಿವಾರ ಪೂರ್ಣಗೊಂಡಿದೆ ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದ ವೆಬರ್ ಹಾಗೂ ಸನ್ನಿ ದಂಪತಿ ಮಗುವಿಗೆ ನಿಶಾ ಕೌರ್ ವೆಬರ್ ಎಂದು ನಾಮಕರಣ ಮಾಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com