ಊರಿಗೆಲ್ಲ ಬೆಂಕಿ ಹಚ್ಚಿ ಬಂದ ಜಿಹಾದಿಗಳಿಗೆ ಕಾಂಗ್ರೆಸ್‌ ಸರ್ಕಾರ ಬಕೆಟ್‌ ಹಿಡೀತಿದೆ : ಅನಂತ್ ಹೆಗಡೆ

ಕಾರವಾರ : ಕರ್ನಾಟಕದ ಸಿಎಂ ಸಿದ್ದರಾಮಯ್ಯನವರು ಬ್ರಿಟೀಷರೂ ನಾಚಿಕೊಳ್ಳುವಂತೆ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ.  ಇಂತಹ ಮುಖ್ಯಮಂತ್ರಿ ಇರುವುದಕ್ಕೆ ನಿಜಕ್ಕೂ ನಮಗೆ ನಾಚಿಕೆಯಾಗಬೇಕು ಎಂದು ಕೇಂದ್ರ ಸಚಿವ ಅನಂತ್ ಕುಮಾರ್‌ ಹೆಗಡೆ ಹೇಳಿದ್ದಾರೆ.

ಹೊನ್ನಾವರದಲ್ಲಿ ನಡೆದ ಜನಸುರಕ್ಷಾ ಯಾತ್ರೆಯಲ್ಲಿ ಮಾತನಾಡಿದ ಅವರು, ಜಿಹಾದಿಗಳು ಊರಿಗೆಟ್ಟ ಬೆಂಕಿಇಟ್ಟು ಅಚ್ಚುಕಟ್ಟಾಗಿ ಮನೆಗೆ ಬಂದು ಕೂರುತ್ತಾರೆ. ಈ ಸರ್ಕಾರ ಅವರ ಹಿಂದೆ ಬಕೆಟ್‌ ಹಿಡಿದುಕೊಂಡು ಹೋಗುತ್ತದೆ. ಇಂತಹ ಗತಿಗೆಚ್ಚ ಸರ್ಕಾರವನ್ನು ಇಲ್ಲಿಯವರೆಗೂ ನಾನು ನೋಡಿಲ್ಲ. ಇಂತಹ ಮುಖ್ಯಮಂತ್ರಿ ಇರುವುದಕ್ಕೆ ನಿಜಕ್ಕೂ ನಾಚಿಕೆಯೆನಿಸುವುದಾಗಿ ಹೇಳಿದ್ದಾರೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೆಲವರು ಪ್ರಶಸ್ತಿ ವಾಪಸ್‌ ಮಾಡುವುದಾಗಿ ಹೇಳಿದ್ದರು. ನಾವೇ ಬುಟ್ಟಿ ತಂದಿಡುತ್ತೇವೆ. ನಿಮ್ಮ ಪ್ರಶಸ್ತಿಗಳನ್ನು ಆ ಬುಟ್ಟಿಯಲ್ಲಿ ತಂದು ನೀವು ಹಾಕಬಹುದು. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ನಾವು ಅಧಿಕಾರಕ್ಕೆ ಬಂದರೆ ದರಿದ್ರವಾಗಿರುವ ಕರ್ನಾಟಕ ರಾಜ್ಯವನ್ನು ಸುಭೀಕ್ಷ ರಾಜ್ಯವನ್ನಾಗಿ ಮಾಡುತ್ತೇವೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com