ಆಸ್ಕರ್‌ನಲ್ಲಿ ಭಾರತೀಯ ಚಿತ್ರರಂಗದ ತಾರೆಗಳಾದ ಶಶಿ ಕಪೂರ್‌, ಶ್ರೀದೇವಿ ಸ್ಮರಣೆ

ಹಾಲಿವುಡ್‌ನ ಪ್ರತಿಷ್ಠಿತ 90ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಅಗಲಿದ ತಾರೆಗಳಾದ ಶಶಿಕಪೂರ್‌ ಹಾಗೂ ಶ್ರೀದೇವಿಯವರನ್ನು ಸ್ಮರಿಸಲಾಗಿದೆ. ಕಾರ್ಯಕ್ರಮದಲ್ಲಿ ಗಾಯಕ ಎಡ್ಡೀ ವೆಡ್ಡರ್‌, ರೂಮ್‌ ಎಟ್‌ ದಿ ಟಾಪ್‌ ಹಾಡಿನ ಮೂಲಕ ಅಗಲಿದ ಖ್ಯಾತನಾಮರಿಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

ಶಶಿ ಕಪೂರ್‌ ಬಾಲನಟನಾಗಿ ಚಿತ್ರರಂಗವನ್ನು ಪ್ರವೇಶಿಸಿದ್ದು, 1961ರಲ್ಲಿ ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಗಳಿಸಿದ್ದು 2017ರ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದರು. ಇವರು ಪದ್ಮಭೂಷಣ, ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿಗೂ ಭಾಜನರಾಗಿದ್ದರು.

ಬಾಲಿವುಡ್‌ನಲ್ಲಿ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಎಂಬ ಹೆಸರು ಪಡೆದಿದ್ದ ಶ್ರೀದೇವಿ, ವಿವಿಧ ಭಾಷೆಗಳಲ್ಲಿ ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ತಮ್ಮ ಅಮೋಘ ಅಭಿನಯದಿಂದ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದರು, ಇವರಿಗೂ ಪದ್ಮ ಪ್ರಶಸ್ತಿ ಲಭಿಸಿತ್ತು. 2018ರ ಫೆಬ್ರವರಿ 24ರಂದು ಇವರು ನಿಧನರಾಗಿದ್ದರು.

Leave a Reply

Your email address will not be published.