ಸಿದ್ದರಾಮಯ್ಯನವರ ಗಂಡಸ್ತನದ ಬಗ್ಗೆಯೇ ಮಾತನಾಡಿದ ಈಶ್ವರಪ್ಪ…. ಹೇಳಿದ್ದೇನು..?

ಬೈಂದೂರು : ಸಿಎಂ ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿದ್ದಾರೆ.

ಉಡುಪಿ ಜಿಲ್ಲೆ ಬೈಂದೂರಿನಲ್ಲಿ ನಡೆದ ಬಿಜೆಪಿ ಸುರಕ್ಷಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ನಡವಳಿಕೆಯೇ ಸರಿಯಿಲ್ಲ. ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ. ಇದೇ ಕಾರಣಕ್ಕೆ ಟಿಪ್ಪು ಜಯಂತಿ ಆಚರಣೆ ಮಾಡಿದ್ರು. ಮುಸಲ್ಮಾನರ ಓಟು ಗಟ್ಟಿ ಮಾಡಲು ಟಿಪ್ಪು ಜಯಂತಿ ಆಚರಿಸಿದ್ರು. ಹಿಂದೂ ಕಾರ್ಯಕರ್ತರ ಕೊಲೆಗೆ ಸಿಎಂ ಪ್ರತಿಕ್ರಿಯಿಸಲ್ಲ. ಇಂದಿರಾಗಾಂಧಿ, ಅವರಪ್ಪನ ಕೈಯ್ಯಲ್ಲೇ RSS ಬ್ಯಾನ್ ಮಾಡಲು ಸಾಧ್ಯವಾಗಲಿಲ್ಲ. Rss ನ್ನು ಸಿದ್ದರಾಮಯ್ಯ ಏನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸಿಎಂ ಇಬ್ರಾಹಿಂ ಇಂದಿರಾಗಾಂಧಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅದಕ್ಕೆ ಸಿದ್ದರಾಮಯ್ಯ ಚಪ್ಪಾಳೆ ಹೊಡೆದಿದ್ದರು ಎಂದಿರುವ ಈಶ್ವರಪ್ಪ, ಕಾಂಗ್ರೆಸ್ ಸೇರದಿದ್ದರೆ ಸಿದ್ದರಾಮಯ್ಯನದ್ದು ನಾಯಿಪಾಡಾಗುತ್ತಿತ್ತು.  ಪ್ರತ್ಯೆಕ ಲಿಂಗಾಯತ ಧರ್ಮ ವಿಚಾರದಲ್ಲಿ ಸಿಎಂ ಕುರ್ಚಿ ಅಲ್ಲಾಡುತ್ತಿದೆ. ಓಟಿಗಾಗಿ ಜಾತಿ ಧರ್ಮಕ್ಕೆ ಬೆಂಕಿ ಇಡೋದು ಸುಲಭವಲ್ಲ. ಸಿದ್ದರಾಮಯ್ಯ ನ ಗಂಡಸ್ತನ ಎಲ್ಲೋಗಿತ್ತು. ಬೇರೆ ಧರ್ಮದ ಧಾರ್ಮಿಕ ಕೇಂದ್ರ ಯಾಕೆ ಮುಟ್ಟಿ ನೋಡಲ್ಲ. ಹಿಂದೂ ಮಠ ಮಂದಿರ ವಶ ಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇವರಂಥಾ ಸಿಎಂ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ಸೋಲಿಗೆ ನಾನು ಕಾರಣ ಅಲ್ಲ ಅಂತಾ ಹೇಳಿದೇವಿ ಚಾಮುಂಡಿ ಮೇಲೆ ಪ್ರಮಾಣ ಮಾಡಲಿ. ಪರಮೇಶ್ವರ್ ಸೋಲಿಸಿದ್ದು ಇದೇ ಸಿದ್ದರಾಮಯ್ಯ. ಇಲ್ಲದಿದ್ದರೆ ನೀವು ಹೇಳಿದಂತೆ ನಾನು ಕೇಳ್ತೇನೆ ಎಂದಿದ್ದಾರೆ

Leave a Reply

Your email address will not be published.