BJP ಮುಖಂಡನಿಂದ ಗೂಂಡಾಗಿರಿ : ಹೋಟೆಲ್‌ ಕಾರ್ಮಿಕನ ಮೇಲೆ ಹಲ್ಲೆ

ಚಿಕ್ಕೋಡಿ  : ಕಾಂಗ್ರೆಸ್‌ ಆಯ್ತು ಈಗ ಬಿಜೆಪಿ ನಾಯಕರ ಗೂಂಡಾಗಿರಿ ಶುರುವಾಗಿದೆ. ಚಿಕ್ಕೋಡಿಯ ಬಿಜೆಪಿ ಮುಖಂಡರೊಬ್ಬರು ಹೋಟೆಲ್‌ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದಾರೆ.

ಅಥಣಿ ಪಟ್ಟಣದ ಪುರಸಭೆಯ ಮಾಜಿ ಅಧ್ಯಕ್ಷ ಉಮೇಶ್‌ ಬಂಟೋಡಕರ್‌ ಎಂಬುವವರು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು ರಮೇಶ್‌ ಅಜೂರು ಎಂದು ಹೆಸರಿಸಲಾಗಿದ್ದು, ಈತ ರೆಸ್ಟೋರೆಂಟ್‌ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಹಲ್ಲೆಯಿಂದಾಗಿ ರಮೇಶ್‌ ಗಂಭೀರವಾಗಿ ಗಾಯಗೊಂಡಿದ್ದು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೂ ಘಟನೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com