ಅಪ್ರಾಪ್ತ ಪ್ರೀತಿಗೆ ಬಲಿಯಾದ ಬಾಲಕಿ : ಬಾಲಕನ ಮೇಲಿನ ಸಿಟ್ಟಿಗೆ ಜನ ಮಾಡಿದ್ದೇನು ?

ಚಿಕ್ಕಬಳ್ಳಾಪುರ : ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ರಮ್ಯಾ(14) ಎಂದು ಹೆಸರಿಸಲಾಗಿದೆ. ಆದರೆ ಬಾಲಕ ರಮ್ಯಾಗೆ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ತಾನೇ ನೇಣು ಬಿಗಿದಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಬಾಲಕಿ ಸಾವಿನ ಬಳಿಕ ಗ್ರಾಮಸ್ಥರು ಬಾಲಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಮ್ಯಾ ಹಾಗೂ ಬಾಲಕನ ಮಧ್ಯೆ ಪ್ರೀತಿ ಇತ್ತು. ಆದರೆ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com