ನಾನು 100 ವರ್ಷ ಬದುಕಬೇಕು, ಬದುಕೇ ಬದುಕುತ್ತೀನಿ : CM ಸಿದ್ದರಾಮಯ್ಯ

ಚಾಮರಾಜನಗರ : ನಾನು 100 ವರ್ಷ ಬದುಕಬೇಕು. ನಾನುನ ಬದುಕೇ ಬದುಕುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆಯ ಹಾಲಹಳ್ಳಿಯಲ್ಲಿ ದಿ. ಮಹದೇವ್‌ ಪ್ರಸಾದ್‌ ಅವರ ಸ್ಮರಣಾ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಹ್ಮ ಹಣೆಬರಹ ಬರೆಯಲ್ಲ. ಒಂದು ವೇಳೆ ಬರೆದರೂ ಅವರಿಗೆ ಒಂದು, ಇವರಿಗೆ ಒಂದು ಅಂತ ಬರೆದಿರುವುದಿಲ್ಲ. ಆದರೆ ಇದನ್ನೇ ಮುಂದಿಟ್ಟುಕೊಂಡು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬ್ರಹ್ಮ ಹಣೆಬರಹ ಬರೀತಾನೆ ಅಂತ ಸುಳ್ಳು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ನಾನು ಬಸವಣ್ಣನ ಅನುಯಾಯಿ. ಹಾಗಾಗಿ 100 ವರ್ಷ ಬದುಕುತ್ತೇನೆ. ಮತ್ತೊಂದು ಜನ್ಮ, ಮಗದೊಂದು ಜನ್ಮ, ಇವೆಲ್ಲ ಏನೂ ಇಲ್ಲ ಎಂದಿದ್ದಾರೆ.

ಇದೇ ವೇಳೆ ಕೆ.ಎಸ್.ಈಶ್ವರಪ್ಪ ವಿರುದ್ದ ಹರಿಹಾಯ್ದಿರುವ ಸಿಎಂ, ಆತ ಒಬ್ಬ ಸಂಸ್ಕೃ ತಿ ಹೀನ. ಈಶ್ವರಪ್ಪನಿಗೆ ಭಾಷೆ ಗೊತ್ತಿಲ್ಲ. ಈಶ್ವರಪ್ಪನ ನಾಲಿಗೆಗೂ ಬ್ರೈನ್ ಗೂ ಲಿಂಕ್ ಹೋಗಿದೆ.‌ ಈಶ್ವರಪ್ಪ ಮನುಷ್ಯತ್ವ ಇಲ್ಲದವರು. ಅರ್ಥಮಾಡಿ ಕೊಳ್ಳಲಾಗದವರು ಎಂದು ಗುಡುಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com