ಆಗ ನಾನು ಮಂತ್ರಿಯಾಗಿದ್ದು ಜನರ ಸೇವೆ ಮಾಡೋಕೆ, ನಾಯಿ ಹಿಡಿಯೋಕಲ್ಲ : R ಅಶೋಕ್‌

ಬೆಂಗಳೂರು : ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆ ಬಿಜೆಪಿ ಮುಖಂಡ ಆರ್‌. ಅಶೋಕ್‌ ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ತೋಡಿದ ಗುಂಡಿ ಮುಚ್ಚೋದಕ್ಕಾಗಿ ನಾವು ಪಾದಯಾತ್ರೆ ಮಾಡ್ತಾ ಇದ್ದೇವೆ. ರಾಹುಲ್ ಗಾಂಧಿ ಹೋದಲೆಲ್ಲ ಶನಿ ಹಿಡಿಯುತ್ತೆ.  ರಾಹುಲ್ ಗಾಂಧಿಗೆ ರಾಹುಕಾಲ ಶುರುವಾಗಿದೆ. ಅಂತಹ ರಾಹುಲ್ ಕರ್ನಾಟಕಕ್ಕೆ ಬಂದು ಪ್ರಚಾರ ಮಾಡಿದ್ರೆ ಗೆಲ್ತಾರಾ? ಎಂದು ವ್ಯಂಗ್ಯ ಮಾಡಿದ್ದಾರೆ.

 

ಸಿದ್ದರಾಮಯ್ಯ 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಹುಟ್ಟೊ ಮಕ್ಕಳ ಮೇಲೂ 38 ಸಾವಿರ ಸಾಲದ ಹೊರೆ ಇದೆ. ಬಿಜೆಪಿ ಬಿಬಿಎಂಪಿ ಅಡ ಇಟ್ಟಿತ್ತು ಎಂದು ಸಿದ್ದರಾಮಯ್ಯ ಆರೋಪಿಸ್ತಾರೆ. ಇವರು ಏನ್ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನನಗೆ ನಾಯಿಗಳನ್ನು ಹಿಡಿಯೋಕೆ ಆಗಿಲ್ಲ ಅಂತಾರೆ ಸಿದ್ದರಾಮಯ್ಯ. ನಾನು ಮಂತ್ರಿ ಆಗಿದ್ದು ಜನರ ಸೇವೆ ಮಾಡೋಕೆ. ನಾಯಿ ಹಿಡಿಯೋಕೆ ನಾ ಮಂತ್ರಿ ಆಗಿರಲಿಲ್ಲ. ಇಂತಹ ಇತಿಹಾಸ ಇರುವ ಸಿದ್ದರಾಮಯ್ಯ ನಮಗೆ ಪಾಠ ಮಾಡ್ತಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.