ಆರಂಭಕ್ಕೂ ಮುನ್ನ ಅಂತ್ಯ ? : KPJP ಯಿಂದ ಉಪೇಂದ್ರ ಅವರಿಗೇ ಗೇಟ್‌ಪಾಸ್‌…?

ಬೆಂಗಳೂರು : ಕೆಲ ತಿಂಗಳ ಹಿಂದಷ್ಟೇ ಅಸ್ಥಿತ್ವಕ್ಕೆ ಬಂದಿದ್ದ ಕೆಪಿಜೆಪಿ ಪಕ್ಷದಲ್ಲಿ ಭಿನ್ನಮತ ಎದುರಾಗಿದೆ. ಪಕ್ಷದ ಸಂಸ್ಥಾಪಕ ಉಪೇಂದ್ರ ಅವರ ಜೊತೆ ಭಿನ್ನಾಭಿಪ್ರಾಯ ಹೊಂದಿರುವ ಮುಖ್ಯ ಕಾರ್ಯದರ್ಶಿ ಮಹೇಶ್‌ ಗೌಡ ಇಂದು ಸಭೆ ನಡೆಸುವ ಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳಲಾಗಿದ್ದು, ಕೆಪಿಜೆಪಿ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ಅವರನ್ನೇ ಪಕ್ಷದಿಂದ ಹೊರಹಾಕುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 3ರಂದು ಕೆಪಿಜೆಪಿ ಪಕ್ಷದ ಸಭೆ ನಡೆದಿತ್ತು. ಈ ಸಭೆಯಲ್ಲಿ ಉಪೇಂದ್ರ ಪರವಾಗಿ ಅವರ ಸಹೋದರ ಸುಧೀಂದ್ರ ಭಾಗಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಅಧಿಕಾರವನ್ನು ಉಪೇಂದ್ರ ಅವರಿಗೆ ನೀಡಬೇಕೆಂದು ಹೇಳಿದ್ದರು. ಇದನ್ನು ಬಹುತೇಕ ಪದಾದಿಕಾರಿಗಳು ಒಪ್ಪಿಕೊಂಡಿಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ಉಪೇಂದ್ರ ಪಕ್ಷ ತೊರೆಯುತ್ತಾರೆ ಎಂದು ಹೇಳಿದ್ದು, ಇದರಿಂದ ಅಸಮಾಧಾನಗೊಂಡ ಪದಾದಿಕಾರಿಗಳು ಉಪೇಂದ್ರ ಅವರನ್ನೇ ಪಕ್ಷದಿಂದ ಹೊರಹಾಕಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com