ಹಿಂದೂವಾಗಿ ಹುಟ್ಟಿರುವ CM ಹಿಂದೂ ಧರ್ಮವನ್ನೇ ನಾಶಮಾಡುತ್ತಿದ್ದಾರೆ : ಪ್ರತಾಪ್‌ ಸಿಂಹ

ಸೂಳ್ಯ :  ಬಿಜೆಪಿ ಜನಸುರಕ್ಷಾ ಯಾತ್ರೆ ಇಂದು ಸೂಳ್ಯಕ್ಕೆ ತಲುಪಿದ್ದು, ಈ ವೇಳೆ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದಾರೆ.

ಪಿಎಫ್ಐ ವಿರುದ್ಧ ಹಲವಾರು ಕ್ರಿಮಿನಲ್‌ ಪ್ರಕರಣಗಳಿವೆ. 175 ಕ್ರಿಮಿನಲ್ ಪ್ರಕರಣಗಳನ್ನು ಸಿಎಂ‌‌ ಸಿದ್ದರಾಮಯ್ಯ ವಾಪಾಸ್ ಪಡೆದಿದ್ದಾರೆ. ರಾಜ್ಯದಲ್ಲಿ ಸಂಘಪರಿವಾರದ ಕಾರ್ಯಕರ್ತರ ಹತ್ಯೆಯ ಹಿಂದೆ ಪಿಎಫ್ ಐ ಕೈವಾಡ ಇದೆ. ಕರಾವಳಿ ಅಂದ್ರೆ ಯಾಸೀನ್ ಭಟ್ಕಳ್‌ ಹಾಗೂ ಪಿಎಫ್ಐ ದೌರ್ಜನ್ಯ ನೆನಪಾಗುತ್ತಿರುವುದಾಗಿ ಹೇಳಿದ್ದಾರೆ.

ಕೊಡಗಿಗೆ ವ್ಯಾಪಾರ ಮಾಡಲು ಬಂದವರು ಇದೀಗ  ಕಂಟಕವಾಗಿ ಮಾರ್ಪಡುತ್ತಿದ್ದಾರೆ. ಕುರಾನ್ ಬೈಬಲ್ ನಲ್ಲಿ ಎಲ್ಲಾ ಧರ್ಮಗಳು ಸಮಾನ ಎಂದು ಹೇಳಿಲ್ಲ. ಹಿಂದೂ ಧರ್ಮದಲ್ಲಿ ಮಾತ್ರ ಹೇಳಿದೆ

ಹಿಂದೂಗಳಾಗಿ ಹುಟ್ಟಿ ಹಿಂದೂ ಧರ್ಮದ ನಾಶ ಮಾಡಲು ಸಿಎಂ‌‌ ಸಿದ್ದರಾಮಯ್ಯ  ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com