ಶ್ರೀದೇವಿಗೆ ಮಗಳ ಅಂತಿಮ ನಮನ : ಅಗಲಿದ ಅಮ್ಮನಿಗೆ ಪತ್ರ ಬರೆದ Jahnavi Kapoor

ಕಳೆದ ವಾರ ದುಬೈನಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ ಬಾಲಿವುಡ್ ಸೂಪರ್ ಸ್ಟಾರ್ ಶ್ರೀದೇವಿ ಅವರಿಗೆ ಮಗಳು ಜಾಹ್ನವಿ ಕಪೂರ್ ಪತ್ರವೊಂದನ್ನು ಬರೆಯುವುದರ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ. ಅಗಲಿದ ಅಮ್ಮನಿಗಾಗಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಭಾವನಾತ್ಮಕ ಸಂದೇಶವನ್ನು ಜಾಹ್ನವಿ ಕಪೂರ್ ಪೋಸ್ಟ್ ಮಾಡಿದ್ದಾರೆ.

Image result for jhanvi kapoor

Related image

‘ ನನ್ನ ಎದೆಯಲ್ಲಿ ಈಗ ಶೂನ್ಯದ ಅನುಭವಾಗುತ್ತಿದೆ. ಆದರೂ ನಾಣು ಇದರೊಂದಿಗೆ ಬದುಕಲೇ ಬೇಕು ಎಂಬುದೂ ನನಗೆ ಗೊತ್ತು. ಈಗಲೂ ನಿನ್ನ ಪ್ರೀತಿ ಅನುಭವಕ್ಕೆ ಬರುತ್ತದೆ. ನೀವು ದುಃಖ ಹಾಗೂ ನೋವಿನಿಂದ ನನ್ನನ್ನು ರಕ್ಷಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ. ಕಣ್ಣು ಮುಚ್ಚಿದಾಗಲೆಲ್ಲ ನಾವಿಬ್ಬರೂ ಒಟ್ಟಿಗೆ ಕಳೆದ ಮಧುರ ಕ್ಷಣಗಳೇ ನೆನಪಾಗುತ್ತಿವೆ ‘ ಎಂದು ಬರೆದಿದ್ದಾರೆ.

Image result for jhanvi kapoor sridevi

20 ವರ್ಷದ ಜಾಹ್ನವಿ ಕಪೂರ್ ಮಾರ್ಚ್ 7ನೇ ತಾರೀಖಿನಂದು 21ನೇ ವಸಂತಕ್ಕೆ ಕಾಲಿಡಲಿದ್ದಾರೆ. ‘ ಜನ್ಮದಿನದ ಸಂದರ್ಭದಲ್ಲಿ ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುವುದೇನೆಂದರೆ ನಿಮ್ಮ ತಂದೆ ತಾಯಿಯನ್ನು ಪ್ರೀತಿಸಿ. ಅವರ ಬಗ್ಗೆ ಕಾಳಜಿ ವಹಿಸಿ ಅವರಿಗೆ ನಿಮ್ಮ ಪ್ರೀತಿಯ ಅನುಭವವಾಗುವಂತೆ ಮಾಡಿ. ಅವರೇ ನಿಮ್ಮನ್ನು ಬೆಳೆಸಿದವರು. ನೀವೆಲ್ಲ ನನ್ನ ಅಮ್ಮನನ್ನು ಇಷ್ಟ ಪಟ್ಟಿದ್ದೀರಿ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ‘ ಎಂದು ಬರೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com