Islamabad : ಪಾಕಿಸ್ತಾನ ಸಂಸತ್‌ಗೆ ಹಿಂದೂ ಮಹಿಳೆ ಕೃಷ್ಣ ಕುಮಾರಿ ಆಯ್ಕೆ

ಇಸ್ಲಾಮಾಬಾದ್‌ : ಪಾಕಿಸ್ತಾನದ ಸಂಸತ್ತಿಗೆ ಹಿಂದೂ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ.

ಬಿಲಾವಾಲ್‌ ಭುಟ್ಟೋ ನೇತೃತ್ವದ ಪಾಕಿಸ್ತಾನ ಪೀಪಲ್ಸ್‌ ಪಕ್ಷದ ಕೃಷ್ಣಾ ಕುಮಾರಿ ಕೊಲ್ಹಿ, ಸಿಂಧ್‌ ಪ್ರಾಂತ್ಯದಿಂದ ಆಯ್ಕೆಯಾಗಿದ್ದು, ಇದೊಂದು ಐತಿಹಾಸಿಕ ಸಾಧನೆ ಎಂದು ಬಿಂಬಿತವಾಗುತ್ತಿದೆ.

ಮುಸ್ಲೀಮರೇ ಪ್ರಧಾನವಾಗಿರುವ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಆಯ್ಕೆ ಗಮನಾರ್ಹವಾಗಿದ್ದು, ಈ ಹಿಂದೆ ರತ್ನ ಭಗವಾನ್‌ ದಾಸ್‌ ಚಾವ್ಲಾ ಸೆನೆಟರ್‌ ಆಗಿ ಆಯ್ಕೆಯಾಗಿದ್ದರು. ಈಗ ಮತ್ತೊಬ್ಬ ಮಹಿಳೆ ಸೆನೆಟ್‌ಗೆ ಆಯ್ಕೆಯಾಗಿರುವುದು ವಿಶೇಷ..

ಕೃಷ್ಣಕುಮಾರಿ ಸಿಂಧ್ ಪ್ರಾಂತ್ಯದ ತಾರ್ ಜಿಲ್ಲೆಯ ನಾಗರ್ಪಾರ್ಕರ್ ಕುಗ್ರಾಮದಿಂದವರಾಗಿದ್ದು, 1979ರ ಫೆಬ್ರವರಿಯಲ್ಲಿ ಜುಗ್ನೊ ಕೊಹ್ಲಿ ಬಡ ಕುಟುಂಬದಲ್ಲಿ ಜನಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com