ನೀವು ಹೆಚ್ಚು Lipstick ಬಳಸ್ತಿದ್ದೀರಾ ಹಾಗಾದ್ರೆ ಮರೆಯದೇ ಈ ಸುದ್ದಿಯನ್ನೊಮ್ಮೆ ಓದಿ…!

ಲಿಪ್‌ಸ್ಟಿಕ್‌ ಎಂದರೆ ಯಾವ ಹೆಣ್ಮಕ್ಳಿಗೆ ಇಷ್ಟ ಇರಲ್ಲ ಹೇಳಿ. ಅದರಲ್ಲೂ ಪೇಟೆಯ ಹುಡುಗಿಯರಂತೂ ಲಿಪ್‌ಸ್ಟಿಕ್‌ ಇಲ್ಲದೇ ಹೊರಗೆ ಹೊರಡುವುದೇ ಇಲ್ಲ ಎಂಬಂತಹ ಪರಿಸ್ಥಿತಿಗೆ ಬಂದಿದ್ದೇವೆ. ಹುಡುಗಿಯರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವಂತಹ ಲಿಪ್‌ಸ್ಟಿಕ್‌ನಿಂದ ಹುಡುಗಿಯರಿಗೆ ಏನೆಲ್ಲಾ ಆಗಬಹುದು ಎಂಬುದನ್ನ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಲಿಪ್‌ಸ್ಟಿಕ್‌ ಹಚ್ಚಿರುವ ಹುಡುಗಿಯರನ್ನು ನೋಡೋಕೆ ಅದೇನೋ ಒಂಥರಾ ಚಂದ. ಆದರೆ ಈ ಲಿಪಿಸ್ಟಿಕ್‌ ಲಿಪ್‌ ತನಕ ಮಾತ್ರ ಇದ್ರೆ ಒಳ್ಳೆಯದು. ಅದೆಷ್ಟೋ ಬಾರಿ ಊಟ ಮಾಡುವಾಗ ಲಿಪ್‌ಸ್ಟಿಕ್‌ ಹೊಟ್ಟೆ ಸೇರುತ್ತದೆ. ಉತ್ತಮ ಕ್ವಾಲಿಟಿಯ ಲಿಪ್‌ಸ್ಟಿಕ್‌  ಆಗಿದ್ರೆ ಸ್ವಲ್ಪ ಮಟ್ಟಿಗೆ ಅಪಾಯ ಕಡಿಮೆ ಎನ್ನಬಹುದು.  ಆದರೆ ಅದೆಷ್ಟೋ ಹುಡುಗಿಯರು ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ, ಅಥವಾ ಖರೀದಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಕಡಿಮೆ ಬೆಲೆಯ ,ಕ್ವಾಲಿಟಿ ಇಲ್ಲದ ಲಿಪ್‌ಸ್ಟಿಕ್‌ ಖರೀದಿಸುತ್ತಾರೆ. ಇದರಲ್ಲಿ ಸೀಸದ ಅಂಶ ಹೆಚ್ಚಿದ್ದು, ಇದನ್ನು ತಯಾರಿಸುವಾಗ ಅದಕ್ಕೆ ಸೀಸವನ್ನು ಹಾಕಿರುತ್ತಾರೆ. ಈ ಸೀಸ ಆರೋಗ್ಯಕ್ಕೆ ಹಾನಿಕರವಾಗಿದ್ದು, ಬುದ್ದಿಮಟ್ಟವನ್ನು ತಗ್ಗಿಸುವುದರ ಜೊತೆಗೆ ಹಾರ್ಮೋನುಗಳನ್ನು ಏರುಪೇರುಗೊಳಿಸುತ್ತದೆ. ಇದರಿಂದ ನಡವಳಿಕೆಯ ಮೇಲೂ ಪರಿಣಾಮ ಬೀರುತ್ತದೆ.

ಅಲ್ಲದೆ ಇದರಿಂದ ಕಲಿಕೆಯ ಸಾಮರ್ಥ್ಯವೂ ತಗ್ಗುವುದಾಗಿ ಸಂಶೋಧನೆ ಹೇಳುತ್ತದೆ. ಅಧ್ಯಯನದ ಪ್ರಕಾರ 22 ಲಿಪ್‌ಸ್ಟಿಕ್‌ ಬ್ರಾಂಡ್‌ಗಳಲ್ಲಿ ಶೇ.55ರಷ್ಟು ವಿನಾಶಕಾರಿ ಅಂಶ ಇರುತ್ತದೆ ಎಂಬ ಅಂಶ ಬಹಿರಂಗವಾಗಿದೆ.

ಆದ್ದರಿಂದ ಲಿಪ್‌ಸ್ಟಿಕ್‌ ಬಳಕೆ ಮಾಡುವ ಮಹಿಳೆಯರು ಉತ್ತಮ ಕ್ವಾಲಿಟಿಯ ಅಥವಾ ನೈಸರ್ಗಿಕವಾದ ಲಿಪ್‌ಸ್ಟಿಕ್‌ ಬಳಕೆ ಮಾಡುವುದು ಉತ್ತಮ.

 

Leave a Reply

Your email address will not be published.

Social Media Auto Publish Powered By : XYZScripts.com