ಮೂಢ ನಂಬಿಕೆಗೆ ನಾಲ್ಕು ಕೋಣಗಳ ಬಲಿ : ದೇವರಿಗೆ ಮಾಂಸದ ನೈವೇದ್ಯ ನೀಡಿದ ಗ್ರಾಮಸ್ಥರು

ಕೋಲಾರ : ರಾಜ್ಯ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದ್ದರೂ ರಾಜ್ಯದಲ್ಲಿ ಇನ್ನೂ ಮೌಢ್ಯಾಚರಣೆ ಕಡಿಮೆಯಾಗಿಲ್ಲ. ಕೋಲಾರದಲ್ಲಿ ನಡೆಯ ಜಾತ್ರೆಯ ವೇಳೆ ಇಂದು ಬೆಳ್ಳಂಬೆಳಗ್ಗೆ ನಾಲ್ಕು ಕೋಣಗಳನ್ನು ಬಲಿಕೊಡಲಾಗಿದೆ. ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮದ ನಲ್ಲ ಗಂಗಮ್ಮ ಜಾತ್ರೆಯಲ್ಲಿ ಈ ಬಲಿ ಕೊಡಲಾಗಿದ್ದು, ಕೋಣ ಬಲಿ ನಿಷೇಧದ ನಡುವೆಯೂ ಗ್ರಾಮಸ್ಥರು ಬಲಿ ಕೊಟ್ಟಿದ್ದಾರೆ. ದೇಗುಲದ ಮುಂದೆ ಒಮ್ಮಲೆ 4 ಕೋಣಗಳನ್ನ ಬಲಿ ಕೊಟ್ಟು ದೇವರಿಗೆ ನೈವೇದ್ಯವನ್ನಾಗಿ ಅರ್ಪಿಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com