ನೀರವ್‌ ಮೋದಿಯಿಂದ ಅಧಿಕಾರಿಗಳು ಚಿನ್ನ, ವಜ್ರವನ್ನು ಲಂಚವಾಗಿ ಪಡೆದುಕೊಂಡಿದ್ರು : CBI

ದೆಹಲಿ : ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ನೀರವ್‌ ಮೋದಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಅಧಿಕಾರಿಗಳಿಗೆ ಚಿನ್ನ, ವಜ್ರವನ್ನು ಲಂಚವಾಗಿ ನೀಡಿರುವುದಾಗಿ ಸಿಬಿಐ ಹೇಳಿದೆ.

ಈಗಾಗಲೆ ವಂಚನೆ ಪ್ರಕರಣ ಸಂಬಂದ 14 ಮಂದಿಯನ್ನು ಬಂಧಿಸಿದ್ದು, ತನಿಖೆಯ ವೇಳೆ ಲಂಚ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಹಗರಣದಲ್ಲಿ ಮುಂಬೈ ಶಾಖೆಯ ವಿದೇಶಿ ವಿನಿಮಯ ಶಾಖೆಯ ವ್ಯವಸ್ಥಾಪಕರಾಗಿದ್ದ ಯಶವಂತ್ ಜೋಷಿ ಅವರ ಹೆಸರು ಕೇಳಿಬಂದಿದ್ದು, ಇವರಿಗೆ 60 ಗ್ರಾಂ ನ ರಡು ಚಿನ್ನದ ನಾಣ್ಯ ಹಾಗೂ ವಜ್ರದ ಕಿವಿಯೋಲೆಯನ್ನು ನೀರವ್‌ ಮೋದಿ ಲಂಚವಾಗಿ ನೀಡಿದ್ದು, ಅದನ್ನು ತಾವು ಸ್ವೀಕರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಮೂಲಗಳ ಪ್ರಕಾರ ನೀರವ್‌ ಮೋದಿ ಹಾಂಗ್‌ಕಾಂಗ್‌ನಲ್ಲಿದ್ದು, ಅವರಿಗೆ ಸೇರಿದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published.