Biggboss ಸ್ಪರ್ಧಿ ಸುನಾಮಿ ಕಿಟ್ಟಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಲಯ

ಬೆಂಗಳೂರು : ಅಪಹರಣ ಮತ್ತು ಕೊಲೆ ಬೆದರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ಹಾಗೂ ಆತನ ಸ್ನೇಹಿತರನ್ನು ಐದು ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಅನುಮಾನದ ಮೇಲೆ ಯುವಕರಿಬ್ಬರನ್ನು ಅಪಹರಿಸಿ ಕೊಲೆ ಬೆದರಿಕೆ ಹಾಕಿದ್ದ ಸುನಾಮಿ ಕಿಟ್ಟಿ, ಯೋಗೀಶ್‌, ಅರ್ಜುನ್‌, ಸಂತೋಷ್‌ ಅವರನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ಸುನಿಲ್ ನಾಪತ್ತೆಯಾಗಿದ್ದು, ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ.

ಬಂಧಿತರನ್ನು ಇಂದು ಕೋರ್ಟ್‌  ಮುಂದೆ ಹಾಜರುಪಡಿಸಲಾಗಿದ್ದು,  ನ್ಯಾಯಾಲಯ ವಿಚಾರಣೆಗಾಗಿ ಕಿಟ್ಟಿ ಹಾಗೂ ಸ್ನೇಹಿತರನ್ನು ಐದು ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com