ಶ್ರೀಮನ್ನಾರಾಯಣನಾಗಿ ಬರ್ತಿದ್ದಾರೆ ರಕ್ಷಿತ್‌ ಶೆಟ್ಟಿ : ಕಿರಿಕ್‌ ಹುಡುಗನಿಗೆ ನಾಯಕಿಯಾಗಿದ್ಯಾರು ?

ರಕ್ಷಿತ್‌ ಶೆಟ್ಟಿ ಸಿನಿಮಾ ಅಂದರೆ ‌ಅದೇನೋ ಒಂಥರಾ ಜನರಿಗೆ ಕುತೂಹಲ ಕೆರಳುವಂತೆ ಮಾಡುತ್ತದೆ. ಕಿರಿಕ್‌ ಪಾರ್ಟಿ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ರಕ್ಷಿತ್‌ ಶೆಟ್ಟಿ ಮತ್ತೊಂದು ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ.

ರಕ್ಷಿತ್‌ ಶೆಟ್ಟಿ ಸಿನಿಮಾದ ಮುಂದಿನ ಹೆಸರು ಅವನೇ ಶ್ರೀಮನ್ನಾರಾಯಣ. ಆ ಸಿನಿಮಾಗೆ ಈಗಾಗಲೆ ಹಿರೋಯಿನ್‌ ಸಹ ಫಿಕ್ಸ್ ಆಗಿದ್ದಾರೆ.

ಹೌದು ಈ ಸಿನಿಮಾಗೆ ಸಾನ್ವಿ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ.  ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದು, ಉತ್ತರ ಕರ್ನಾಟದ ಕಲ್ಪನೆಯಲ್ಲಿ ಸಿನಿಮಾ ಮೂಡಿಬರುತ್ತಿದೆ.

ಸದ್ಯದಲ್ಲೇ ಸಿನಿಮಾ ಕುರಿತು ಹೆಚ್ಚಿನ ಮಾಹಿತಿ ಹೊರಬೀಳಲಿದ್ದು, ಅಂದುಕೊಂಡಂತೆ ಆದರೆ ಡಿಸೆಂಬರ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ.

Leave a Reply

Your email address will not be published.

Social Media Auto Publish Powered By : XYZScripts.com