CM ಸರ್ಕಾರದಲ್ಲಿ ನಾನೇನಾದ್ರು ಇದ್ದಿದ್ರೆ ಕಲ್ಲು ಕಟ್ಕೊಂಡು ಸಮುದ್ರಕ್ಕೆ ಹಾರ್ತಿದ್ದೆ : ಅನಂತ್‌ ಹೆಗಡೆ

ಶಿರಸಿ : ಬಿಜೆಪಿ ಮಂಗಳೂರು ಚಲೋ ಜನ ಸುರಕ್ಷಾ ಯಾತ್ರೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಚಾಲನೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಜೈಹಿಂದ್ ಶಾಲಾ  ಮೈದಾನದಲ್ಲಿ  ಪರೇಶ್ ಮೇಸ್ತಾ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಹಿಂದುಗಳ ಹತ್ಯೆ ,ಹಲ್ಲೆ  ಪ್ರಕರಣದ ತನಿಖೆಯನ್ನು ಸಿ.ಬಿ.ಐ ಗೆ ವಹಿಸುವುದು ಹಾಗೂ ಪಿ.ಎಫ್.ಐ.ಹಾಗೂ ಎಸ್.ಡಿ.ಐ ಯನ್ನು ನಿಷೇಧಕ್ಕೆ ಆಗ್ರಹಿಸಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಿದ್ದರಾಮಯ್ಯ ಸರ್ಕಾರ ತಲೆ ತಿರುಕ ಸರ್ಕಾರ. ಎಷ್ಟು ಹೊತ್ತಿಗೆ ಎಲ್ಲಿ ತಿರುಗುತ್ತೆ ಎಂದು ಗೊತ್ತಾಗಲ್ಲ. ಜನ ಸುರಕ್ಷಾ ಯಾತ್ರೆ ಮುಗಿಯುತ್ತಿದ್ದಂತೆ  ಸಿದ್ದು ಸರ್ಕಾರದ ವಿಸರ್ಜನಾ ಹೋಮ ಪ್ರಾರಂಭವಾಗುತ್ತೆ. ಸಿದ್ದು ಸರ್ಕಾರದ ಭ್ರಷ್ಟಾಚಾರ ಶೇಖರಿಸಿಕೊಳ್ಳಲು ಹಾರ್ಡ್‌ ಡಿಸ್ಕ್ ಸಾಕಾಗೋದಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ನಾನಿದ್ದಿದ್ದರೆ ಕಲ್ಲು ಕಟ್ಟಿಕೊಂಡು ಸಮುದ್ರಕ್ಕೆ ಹಾರುತಿದ್ದೆ. ನಿಮ್ಮನ್ನು ಗದ್ದುಗೆಯಿಂದ ಇಳಿಸಿಯೇ ಈ ಯಾತ್ರೆ ಮುಗಿಸುತ್ತೇವೆ. ಸರ್ಕಾರವೇ ಎದುರು ನಿಂತು ಮರ್ಡರ್ ಮಾಡುತ್ತಿದೆ.ತಾಕತ್ತಿದ್ದರೆ ಬನ್ನಿ ನಮ್ಮ ಎದುರು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ನಿಮ್ಮ ಎದುರು ನಿಂತು ಉತ್ತರ ಕೊಡುತ್ತೇನೆ ಎಂದಿದ್ದಾರೆ.

 

Leave a Reply

Your email address will not be published.